ಜಿಲ್ಲೆ

ಶ್ರೀಕೃಷ್ಣನ ತತ್ವಾದರ್ಶ ಎಲ್ಲರೂ ಪಾಲಿಸಿ

ಕುಂದಾಪುರ: ಶ್ರೀ ಕಷ್ಣನ ಬದುಕೇ ಎಲ್ಲರಿಗೂ ಪ್ರೇರಣೆ. ಅವನ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸಿ ಧರ್ಮದ ಹಾದಿಯಲ್ಲಿ ಮುನ್ನಡೆಯಿರಿ ಎಂದು ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಕುಂದಾಪುರ ತಾಲೂಕು ಪ್ರಜಾಸೌಧದ ಕೋರ್ಟ್ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಚಕ ಪ್ರಾಣೇಶ್ ತಂತ್ರಿಗಳು ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿದರು.

ಗೊಲ್ಲ ಸವಾಜ ಅಧ್ಯಕ್ಷ ಶ್ರೀರಾಮ ಗೊಲ್ಲ, ಸಮುದಾಯದ ಪ್ರಮುಖರು, ಉಪತಹಸೀಲ್ದಾರ್‌ಗಳಾದ ಪ್ರಕಾಶ್ ಪೂಜಾರಿ, ಚಂದ್ರಶೇಖರ್, ಶೈಲಜಾ ಹೆಗ್ಡೆ, ಎಸಿ ಕಚೇರಿ ವ್ಯಾನೇಜರ್ ಶಂಕರ್, ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ್, ಯುವಜನಾ ಕ್ರೀಡಾಧಿಕಾರಿ ಕುಸುವಾಕರ್ ಶೆಟ್ಟಿ, ಸವಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.