ಲೋಕಾಪುರ: ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಭಾಗದ ಕಲೆಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸುವ ಜತೆಗೆ ಉಳಿಸಿ ಬೆಳೆಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಶಂಕರ ತಿಮ್ಮಾಪುರ ಸಲಹೆ ನೀಡಿದರು.
ಪಟ್ಟಣದ ಶಿವಯೋಗೇಶ್ವರ ಮಠದ ಆವರಣಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಈರುಳ್ಳಿ ಬೆಳೆದ ರೈತರಿಗೆ ಹಾಗೂ ಕಲಾವಿದರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಟಿವಿ, ಮೊಬೈಲ್‌ಗಳ ಪ್ರಭಾವದಿಂದ ಯುವಕರು ಮತ್ತು ಮಕ್ಕಳಲ್ಲಿ ಕಲೆಯ ಉತ್ಸಾಹ ಕಡಿಮೆಯಾಗಿದೆ. ಗ್ರಾಮೀಣ ಸೊಗಡಿನ ಕಲೆಗಳಾದ ಶಾಸೀಯ ಸಂಗೀತ, ಗೀಗಿಪದ, ಲಾವಣಿ, ಹಂತಿಪದ ಇವೆಲ್ಲ ಕಲೆಗಳನ್ನು ಪ್ರೋತ್ಸಾಹಿಸಲು ಜನಪದ ಕಲಾತಂಡಗಳಿಗೆ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲಾಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಗೋವಿಂದಪ್ಪ ಕೌಲಗಿ ಮಾತನಾಡಿ, ನಮ್ಮ ದೇಶೀಯ ಕಲೆಗಳು ನಶಿಸಿ ಹೋಗಬಾರದೆಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದವರು ಕಲಾವಿದರನ್ನು ಪ್ರೋತ್ಸಾಹಿಸುವ ಜತೆಗೆ ಅವರಿಗೆ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ಈರುಳ್ಳಿ ಬೆಳೆದ 50 ಜನ ರೈತರಿಗೆ ಹಾಗೂ ಹಂತಿ ಪದ ಕಲೆ ಪ್ರದರ್ಶಿಸಿದ 20 ಜನ ಕಲಾವಿದರಿಗೆ ಸನ್ಮಾನಿಸಲಾಯಿತು.
ಬಳಿಕ ಕಲಾವಿದರಾದ ಜ್ಯೂನಿಯರ್ ಮಾಳು ನಿಪನಾಳ, ಖ್ಯಾತ ಗಾಯಕಿ ಡಿಜೆ ಶಿವಾನಿ ಹಾಗೂ ಪ್ರಜ್ವಲ್ ಬಡಿಗೇರ ಕಲಾ ತಂಡದಿಂದ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಜ್ಞಾನೇಶ್ವರ ಮಠದ ಪೀಠಾಧಿಕಾರಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಮೋದ ತೆಗ್ಗಿ, ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ, ಯುವ ಮುಖಂಡ ರಮೇಶ ಗಸ್ತಿ, ಭೀಮನೌಡ ಪಾಟೀಲ, ಭಾಗಪ್ಪ ಕಲಾದಗಿ, ಯಮನಪ್ಪ ಪೂಜಾರಿ, ಯಲ್ಲಪ್ಪ ಗಸ್ತಿ, ಬಡ್ಡೇಸಾಬ ಭಾಗವಾನ, ಹಣಮಂತ ದುರ್ಗನ್ನವರ, ದುರ್ಗಪ್ಪ ಕಾಳನ್ನವರ, ಕೃಷ್ಣಾ ಭಜಂತ್ರಿ, ಕೆ.ಪಿ. ಯಾದವಾಡ, ಸಂಘದ ಪದಾಧಿಕಾರಿಗಳು, ಕಲಾವಿದರು, ಗ್ರಾಮಸ್ಥರು ಇದ್ದರು.