ಚಳ್ಳಕೆರೆ: ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸೈನಿಕ ಸಿದ್ದೇಶ್ ತಿಳಿಸಿದರು.
ಪರಶುರಾಮಪುರ ರೈತ ಸಂಪರ್ಕ ಕೇಂದ್ರದಲ್ಲಿ ಮಾತನಾಡಿ, ವಿಶ್ವಕ್ಕೆ ಮಾದರಿಯಾಗಿ ಬೆಳೆಯುತ್ತಿರುವ ಭಾರತ ಪ್ರತಿ ವಲಯದಲ್ಲೂ ಪ್ರಗತಿ ಕಾಣಬೇಕಿದೆ. ಗ್ರಾಮೀಣ ಭಾಗದ ಪ್ರತಿಭಾನ್ವಿತರು ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.
ಗ್ರಾಪಂ ಅಧ್ಯಕ್ಷ ಜಗಲೂರಸ್ವಾಮಿ, ಜಯವೀರಚಾರಿ, ದೇವರಾಜು, ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ, ಕೃಷಿ ಅಧಿಕಾರಿ ಎಸ್.ಆರ್.ಜೀವನ್, ಜಂಪಣ್ಣ, ಪ್ರಕಾಶ್, ಹನುಮಂತರಾಯಪ್ಪ, ಖಾದರ್, ಕೆ.ವಿ.ಸುರಾಜ್ ಇತರರಿದ್ದರು.
ಚನ್ನಮ್ಮನಾಗತಿಹಳ್ಳಿ ಕಾವಲಿನ ರಿಪ್ಲೆಕ್ಸ್ ಎನರ್ಜಿ ಸೋಲಾರ್ ವಲಯ: ಡಿ.ದಾದಾಪೀರ್, ವೇಣು ಪಾಟೀಲ್, ಎಚ್.ಲಂಕೇಶ್, ವಿಶ್ವನಾಥ್, ಚೇತನ್, ನಿಂಗಣ್ಣ, ಚಟ್ಟೇಕಂಬ ರಾಜು, ಶಿವದತ್ತ, ಮಹೇಶ್, ವಿಜಯಣ್ಣ ಇತರರಿದ್ದರು.
ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: ವೈದ್ಯಾಧಿಕಾರಿ ಡಾ.ಬಿಂದುಶ್ರೀ, ತಾಲೂಕು ಲ್ಯಾಬ್ ನೂಡಲ್ ಅಧಿಕಾರಿ ಎಚ್. ತಿಪ್ಪೇಸ್ವಾಮಿ, ಎಲ್.ಎಚ್.ಅಶ್ವಿನಿ, ಎಫ್‌ಡಿಎ ತಿಪ್ಪೇರುದ್ರಸ್ವಾಮಿ, ಫಾರ್ಮಸಿಸ್ಟ್ ಮಮತಾ, ಬಾಬು ರಾಜೇಂದ್ರ, ಸಿಎಚ್‌ಒ ಅಮೀದ್, ರಂಜಿತಾ, ವಸಂತಮ್ಮ, ಗೌರಮ್ಮ, ಲಕ್ಷ್ಮೀ, ವಿಶಾಲಾಕ್ಷಿ ಇದ್ದರು.