ಜಿಲ್ಲೆ

ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು

ಪ್ರಶಾಂತ ಹೂಗಾರ

ಸಂಕೇಶ್ವರ: ಪರಿಸರ ರಕ್ಷಣೆ ಕೇವಲ ಜಾಗೃತಿಯಾಗದೇ ಆಚರಣೆ ರೂಪಕ್ಕೆ ತರಬೇಕು. ಶಾಲೆಯ ಪ್ರತಿ ಮಗುವಿನ ಜನ್ಮ ದಿನದಂದು ಸಸಿ ನೆಡುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಬ್ರಿಲಿಯಂಟ್ ಸಿಬಿಎಸ್‌ಇ ಸ್ಕೂಲ್ ಅಧ್ಯಕ್ಷ ಪವನ ಕಣಗಲಿ ಹೇಳಿದರು.

ಇಲ್ಲಿಯ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಶಾಲಾ ಪರಿಸರದಲ್ಲಿ ಹಣ್ಣಿನ ಸಸಿ ನೆಡಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಸಾಧ್ಯ ಎಂದರು.

ಚಿಕ್ಕೋಡಿ ಜಿಲ್ಲಾ ಎಲೆಕ್ಟಾನಿಕ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಸಿದ್ದೇಶ ಪುಠಾಣೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ವ್ಯವಸ್ಥೆ, ರಕ್ಷಣೆ ಮಹತ್ವ ಸಾರುವ ಮೂಲಕ ಬ್ರಿಲಿಯಂಟ್ ಶಾಲೆ ಮಹತ್ತರ ಕಾರ್ಯಕ್ಕೆ ಮುಂದಾಗಿದೆ ಎಂದರು.

ಆಡಳಿತಾಧಿಕಾರಿ ವಿನಯ ಹಾಲದೇವರಮಠ, ಪ್ರಾಚಾರ್ಯೆ ನಸೀಮಾ ಢಾಂಗೆ ಇತರರಿದ್ದರು. ಧನಶ್ರೀ ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿನಿ ಮೀನಾಕ್ಷಿ ಗೌಡರ ನಿರೂಪಿಸಿದರು.