ಹಿಂಡಲಗಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಎಲ್​.ಎನ್​. ಮುಕುಂದರಾಜು ಉದ್ಘಾಟಿಸಿದರು. ಡಾ.ಭೀಮಾಶಂಕರ ಗುಳೇದ, ನಾಗರಾಜ ಯಲಚವಾಡಿ, ವಿ.ಕೃಷ್ಣಮೂರ್ತಿ ಇತರರಿದ್ದರು. 
ಜಿಲ್ಲೆ

ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಸಮಾಜದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು. ಜತೆಗೆ ಸಹಬಾಳ್ವೆ ನಡೆಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯ ಎಲ್​.ಎನ್​. ಮುಕುಂದರಾಜ ಹೇಳಿದರು.

ಸಮೀಪದ ಹಿಂಡಲಗಾ ಕಾರಾಗೃಹದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕೈದಿಗಳಿಗೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪರಿವರ್ತನೆಯಾಗಲು ಇದೊಂದು ಶಾಲೆಯಿದ್ದಂತೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ ಅವರ ಮಾರ್ಗದಲ್ಲಿ ನಡೆಯಬೇಕು ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಭೀಮಾಂಶಕರ ಗುಳೇದ ಮಾತನಾಡಿ, ಕುವೆಂಪು ಅವರ ಮನುಜಮತ ವಿಶ್ವಪಥ ಎಂಬ ಸಂದೇಶದ ಮೂಲಕ ಕಾರಾಗೃಹವಾಸಿಗಳು ತಿಳಿಯದೆ ಅಪರಾಧ ಮಾಡಿರುತ್ತಾರೆ. ತಿದ್ದಿಕೊಳ್ಳುವ ಮೂಲಕ ಮಾನವತೆ ಧರ್ಮ ಪಾಲಿಸಬೇಕು ಎಂದರು.

ಕುವೆಂಪು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಯಲಚವಾಡಿ ಮಾತನಾಡಿ, ನಮ್ಮ ಹೋರಾಟ ಸಮಿತಿ ಮೂರು ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಸಾಹಿತ್ಯ ಕಮಟ, ವಿಚಾರಗೋಷ್ಠಿ ಹಾಗೂ ಸಂವಾದಗಳನ್ನು ಏರ್ಪಡಿಲಾಗುತ್ತಿದೆ ಎಂದರು. ಕಾರಾಗೃಹದ ಮುಖ್ಯ ಅಧೀಕ ವಿ. ಕೃಷ್ಣಮೂರ್ತಿ, ಮಲ್ಲಿಕಾರ್ಜುನ ಕೊಣ್ಣರು, ಸಾಹಿತಿ ಡಾ.ಸರಜೂ ಕಾಟ್ಕರ, ಅಕಾಡೆಮಿ ಸಂಚಾಲಕ ಗಣೇಶ ಅಮೀನಗಡ, ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ ಇತರರಿದ್ದರು.