ರಾಣಿ ಅಬ್ಬಕ್ಕ ಜಯಂತ್ಯುತ್ಸವ ಪ್ರಯುಕ್ತ ದೊಡ್ಡಬಳ್ಳಾಪುರದಲ್ಲಿ ರಥಯಾತ್ರೆ ನಡೆಯಿತು. ಜಾಲಪ್ಪ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಎಬಿವಿಪಿ ಮುಖಂಡರಾದ ಯಶೋಧಾ ರಂಗನಾಥ, ಸುಬ್ರಹ್ಮಣ್ಯ, ಕಾಲೇಜು ಉಪನ್ಯಾಸಕ ರವಿಕಿರಣ್​ ಸೇರಿ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. 
ಜಿಲ್ಲೆ

ಪ್ರತಿಯೊಬ್ಬರಿಗೂ ಇತಿಹಾಸದ ಅರಿವು ಅಗತ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ : ಸ್ವಾತಂತ್ರ್ಯ ಚಳವಳಿಯಲ್ಲಿ ಸಾಕಷ್ಟು ಹೋರಾಟಗಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಇತಿಹಾಸದ ಬಗ್ಗೆ ಪ್ರತಿಯೊಬ್ಬರೂ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ಸಂ ಪರಿವಾರದ ದೊಡ್ಡಬಳ್ಳಾಪುರ ನಗರದ ಕಾರ್ಯವಾಹ ಪೂರ್ಣಚಂದ್​ ತಿಳಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಿಂದ ವೀರ ರಾಣಿ ಅಬ್ಬಕ್ಕ 500ನೇ ಜಯಂತ್ಯುತ್ಸವ ಪ್ರಯುಕ್ತ ನಗರದಲ್ಲಿ ಹಮ್ಮಿಕೊಂಡಿದ್ದ ಬೈಕ್​ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಅಬ್ಬಕ್ಕ ಪ್ರಮುಖರು. ಅವರ 500ನೇ ಜಯಂತ್ಯುತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಮಹಿಳೆಯರ ಹೋರಾಟ, ಸಾಧನೆಗಳ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಭಾಗಿಯಾಗಿ ತ್ಯಾಗ, ಬಲಿದಾನ ಮಾಡಿದ್ದರೂ ಕೆಲವರನ್ನು ಮಾತ್ರ ನೆನಪಿಸಿಕೊಳ್ಳುತ್ತಿದ್ದೇವೆ. ಕೆಲವರ ಬಗ್ಗೆ ಜನರಿಗೆ ತಿಳಿಸುವುದನ್ನು ಇತಿಹಾಸವೇ ಮರೆತಿದೆ. ಆದ್ದರಿಂದ ಈ ಮೂಲಕ ಈ ತಲೆಮಾರಿಗೆ ಅನೇಕ ಹೋರಾಟಗಾರರ ಸಾಧನೆಯ ನೆನಪು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ರಾಣಿ ಅಬ್ಬಕ್ಕ ಜಯಂತ್ಯೋತ್ಸವ ಪ್ರಯುಕ್ತ ವಿವಿಧ ಕಡೆ ರಥಯಾತ್ರೆ ನಡೆಸಲಾಗುತ್ತಿದೆ ಎಂದರು.

ಹಿಂದು ಜಾಗರಣ ವೇದಿಕೆಯ ಯಶೋದಾ ರುನಾಥ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನಗಳ ಕುರಿತು ಪರಿಚಯ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಪಠ್ಯ ಪುಸಕ್ತಗಳಿಂದ ಮರೆಯಾಗಿರುವ ಸ್ವಾತಂತ್ರ್ಯ ಹೋರಾಟಗಾರ ಪರಿಚಯ ಅವರ ಸಾಧನೆಗಳ ಮೂಲಕ ತಿಳಿಸುವ ಕೆಲಸ ಮಾಡಲಾಗುತ್ತಿದೆ. ರಥಾಯಾತ್ರೆ ದೊಡ್ಡಬಳ್ಳಾಪುರದ ನಂತರ ಚಿಕ್ಕಬಳ್ಳಾಪುರಕ್ಕೆ ಸಾಗಲಿದೆ ಎಂದರು.

ಪ್ರಮುಖ ಬೀದಿಗಳಲ್ಲಿ ಜಾಥಾ : ಎಬಿವಿಪಿಯಿಂದ ಹಮ್ಮಿಕೊಂಡಿದ್ದ ರಥಯಾತ್ರೆ ನಗರದ ರೈಲ್ವೆಸ್ಟೇಷನ್​ನಿಂದ ಆರಂಭವಾಗಿ ರಂಗಪ್ಪ ಸರ್ಕಲ್​, ಬಸ್​ ನಿಲ್ದಾಣ, ತೇರಿನ ಬೀದಿ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಟೋಲ್​ ಗೇಟ್​ ಸರ್ಕಲ್​ ಮೂಲಕ ಜಾಲಪ್ಪ ಕಾಲೇಜು ತಲುಪಿತು. ಅಬಕ್ಕ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾಲಪ್ಪ ಶಿಕ್ಷಣ ಸಂಸ್ಥೆಯು ರಥಯಾತ್ರೆಯನ್ನು ಬರಮಾಡಿಕೊಂಡರು.