ಜಿಲ್ಲೆ

ಎಲ್ಲರಿಗೂ ಅಧ್ಯಾತ್ಮದ ಅರಿವು ಅಗತ್ಯ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ದೇಹವೆಂಬ ಬದುಕಿನ ರಥ ಸುರತವಾಗಿ ಎಳೆಯಲು ಧರ್ಮ ಮತ್ತು ಅಧ್ಯಾತ್ಮದ ಅರಿವು ಬೇಕು ಎಂದು ಕಾದರವಳ್ಳಿ ಅದಶ್ಯಾನಂದ ಆಶ್ರಮ ಸೀಮಿಮಠದ ಾಲಾ ಸ್ವಾಮೀಜಿ ಹೇಳಿದರು.

ಸಮೀಪದ ಪಾರಿಶ್ವಾಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಥೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಜಾತ್ರೆಗಳು ಎಲ್ಲರನ್ನೂ ಒಗ್ಗೂಡಿಸಿ ಬದುಕಿನ ಸಹಬಾಳ್ವೆ ನಡೆಸಲು ಸಹಕಾರಿಯಾಗಿವೆ ಎಂದರು.

ಅವರೊಳ್ಳಿ&ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಅವರಿಂದ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸುಭಾಷ ಗುಳಶೆಟ್ಟಿ, ಶಿವಾನಂದ ಪಾಟೀಲ, ಅಶೋಕ ನಾಶಿಪುಡಿ, ಅಡವಯ್ಯ ಕಲ್ಮಠ, ಗುರು ಹಿರೇಮಠ, ಅಶೋಕ ಹಲಸಗಿ, ಸಂತೋಷ ಕಲ್ಮಠ, ಶಿವಾನಂದ ಕುಂಬಾರ, ಶಿವಾನಂದ ಗುದ್ಲಿ ಇತರರು ಇದ್ದರು.