ಜಿಲ್ಲೆ

ಪರಿಸರ ಉಳಿವಿಗೆ ಎಲ್ಲರೂ ಕೈ ಜೋಡಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಸ್ತುತ ಪರಿಸರ ಮತ್ತು ಜೀವವೈವಿಧ್ಯತೆಯ ಉಳಿವಿಗೆ ಇಂದಿನ ಯುವ ಜನತೆ ಒಟ್ಟಾಗಿ ಮುನ್ನಡೆಯುವ ಅಗತ್ಯವಿದೆ ಎಂದು ಐಐಟಿ ನಿರ್ದೇಶಕ ವೆಂಕಪಯ್ಯ ದೇಸಾಯಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿದರು.

ದೇಶದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಹೀಗಾಗಿ ಯುವ ಸಮುದಾಯ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ಪ್ರೊ. ಎಸ್​.ಆರ್​. ಗುಂಜಾಳ ಮಾತನಾಡಿ, ಕೆಲಸದ ಮೇಲಿನ ನಿಷ್ಠೆಯಿಂದ ಉನ್ನತ ಸ್ಥಾನಮಾನ, ಪುರಸ್ಕಾರಗಳು ಸಿಕ್ಕಿರುವುದು ನನ್ನ ಸೌಭಾಗ್ಯ. ಕರ್ನಾಟಕ ಕಾಲೇಜಿನಲ್ಲಿ ಗ್ರಂಥಪಾಲಕನಾಗಿದ್ದಾಗ ಸುಮಾರು 46 ಸಾವಿರ ಗ್ರಂಥಗಳ ಸಂಗ್ರಹ ಹೊಂದಿತ್ತು. ಅನೇಕ ಧೀಮಂತ ಪ್ರಾಚಾರ್ಯರು ಮತ್ತು ಪ್ರಾಧ್ಯಾಪಕರ ಜತೆಗೆ ಅನನ್ಯ ಸಂಬಂಧ ಹೊಂದಿದ್ದೇನೆ ಎಂದರು.

ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಪ್ರೊ. ಎನ್​.ಆರ್​. ಬಾಳಿಕಾಯಿ ಮಾತನಾಡಿದರು. ಡಾ. ಶಶಿಧರ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಡಾ. ವೀಣಾ ಶಾಂತೇಶ್ವರ, ಪ್ರೊ. ಎನ್​.ಆರ್​.ಬಾಳಿಕಾಯಿ, ಹೇಮಾ ಪಟ್ಟಣಶೆಟ್ಟಿ, ಡಾ. ಜಿನದತ್ತ ಹಡಗಲಿ, ಡಾ.ಡಿ.ಬಿ. ಕರಡೋಣಿ, ಡಾ. ಜಾಕೀರ ಗುಳಗುಂಡಿ, ಡಾ. ಮುಕುಂದ ಲಮಾಣಿ, ಡಾ. ವಿ. ಶಾರದಾ, ಡಾ. ಅರುಣಾ ಹಳ್ಳಿಕೇರಿ, ಗುರುಪ್ರಸಾದ ಹೆಗಡೆ, ಇತರರು ಇದ್ದರು.