ಪೀಣ್ಯ,ದಾಸರಹಳ್ಳಿ : ‘ನಾನೂ ಕೂಡಾ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು ಹಾಗಾಗಿ ನನಗೆ ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ವಿಶೇಷ ಕಾಳಜಿ. ಮಕ್ಕಳು ಚನ್ನಾಗಿ ಓದಿ ಸಾಧನೆ ಮಾಡಿದರೆ ಹೆತ್ತವರಿಗೆ, ಊರಿಗೆ ಕೀರ್ತಿ ಬರುತ್ತದೆ ಎಂದು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಹೇಳಿದ್ದಾರೆ.
ಟಿ.ದಾಸರಹಳ್ಳಿಯ ಸರ್ಕಾರಿ ಫ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ದಾಸರಹಳ್ಳಿಯ ವಿವಿಧ ಶಾಲೆ ಹಾಗೂ ಕಾಲೇಜುಗಳಿಗೆ ಸುಜಾತ ಮುನಿರಾಜುರವರ ನೇತೃತ್ವದಲ್ಲಿ ಸೂರಜ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತಾ ಮುನಿರಾಜು ಮಾತನಾಡಿ, ಮಕ್ಕಳು ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನ ಕಡೆಗೆ ಗಮನ ನೀಡಬೇಕು. ಹಾಗೆಯೇ ಮಕ್ಕಳು ಸ್ವಚ್ಛತೆಯನ್ನು ಕಾಪಾಡಬೇಕು. ಮಕ್ಕಳು ತಮ್ಮ ಪೋಷಕರು ತಮಗಾಗಿ ಪಡುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಛಲದಿಂದ ಓದಬೇಕು. ಈಗ ನೀವು ಕಷ್ಟಪಟ್ಟು ಓದುವ ದಿನಗಳು ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಉಮಾದೇವಿ ನಾಗರಾಜ್, ಬಿಜೆಪಿ ಮುಖಂಡರಾದ ನಾಗರಾಜ್, ಎಂ.ಮುನಿರಾಜು, ಬಿ.ಟಿ ಶ್ರೀನಿವಾಸ್, ದೊಡ್ಡಣ್ಣ, ಹೇಮಾಚಲ ರೆಡ್ಡಿ, ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲರಾದ ಗಾಯಿತ್ರಮ್ಮ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್, ಮಹಿಳಾ ಮುಖಂಡರಾದ ಶೋಭಾ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.