ಅಳವಂಡಿ ಸಮೀಪದ ಬಿಸರಹಳ್ಳಿ ನೃಪತುಂಗ ಪ್ರೌಢಶಾಲೆಯಲ್ಲಿ ಪ್ರತಿಬಿಂಬ ಟ್ರಸ್ಟ್, ಆಗೂ ನೀ ಅನಿಕೇತನ ಸಂಸ್ಥೆಯಿಂದ ಜಾಮಿಟ್ರಿ ಬಾಕ್ಸ್, ಸ್ಯಾನಿಟರ್ ಪ್ಯಾಡ್ ವಿತರಿಸಲಾಯಿತು. ಸಂಸ್ಥಾಪಕಿ ಧರಣಿ ಬಸವರಾಜ ಸಸಿ, ಪ್ರಮುಖರಾದ ಬಸವರಾಜ, ಮಂಜುನಾಥ, ಸಂದ್ಯಾ, ಪ್ರಮಿಳಾ ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಉನ್ನತ ಗುರಿ ನಿಗದಿಪಡಿಸಿಕೊಳ್ಳಿ

Gangavati - Desk - Veeresh S Ullagaddi

ಅಳವಂಡಿ: ನಿರಂತರ ಕಠಿಣ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಬೇಕು ಎಂದು ಆಗೂ ನೀ ಅನೀಕೇತನ ಸಂಸ್ಥಾಪಕಿ ಧರಣಿ ಬಸವರಾಜ ಸಸಿ ಹೇಳಿದರು.


ಸಮೀಪದ ಬಿಸರಹಳ್ಳಿ ನೃಪತುಂಗ ಪ್ರೌಢ ಶಾಲೆಯಲ್ಲಿ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್, ಆಗೂ ನೀ ಅನಿಕೇತನ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಣ ಹಾಗೂ ಸ್ತ್ರೀ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಪ್ರತಿಯೊಬ್ಬರ ಜೀವನಕ್ಕೂ ಅವಶ್ಯವಿದ್ದು, ಗುರಿ ತಲುಪಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆೆ. ಶಿಸ್ತಿನಿಂದ ಅಭ್ಯಾಸ ಮಾಡುವ ಜತೆಗೆ ಉನ್ನತ ಗುರಿ ನಿಗದಿಪಡಿಸಿಕೊಳ್ಳಬೇಕು. ಓದಿನೊಂದಿಗೆ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದರು.


ಮುಖ್ಯ ಶಿಕ್ಷಕ ಬಸವರಾಜ ಸಂಶಿ ಮಾತನಾಡಿ, ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರಮಪಟ್ಟು ಓದಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.


250 ಜಾಮಿಟ್ರಿ ಬಾಕ್ಸ್, ಸ್ಯಾನಿಟರ್ ಪ್ಯಾಡ್ ವಿತರಿಸಲಾಯಿತು. ಶಿಕ್ಷಕರಾದ ಕೆ.ಪಿ.ಮಂಜುನಾಥ, ಸಂದ್ಯಾ ಭೋಸಲೆ, ಅಂಗನವಾಡಿ ಕಾರ್ಯಕರ್ತೆ ಪ್ರಮಿಳಾ ಸಸಿ, ಮಕ್ಕಳು ಇದ್ದರು.