ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಬಳಿಗಾರ ಊಟಿ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಯಿತು. 
ಜಿಲ್ಲೆ

ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಕಲಬುರಗಿ ವಲಯ ಮುಖ್ಯಸ್ಥ ಸುರೇಶ ಮಹಾದೇವಪ್ಪ ಮನವಿ

Gangavati - Desk - Veeresh S Ullagaddi

ಗಂಗಾವತಿ: ಬಡ ಕೂಲಿಕಾರರ ಆರ್ಥಿಕ ವೆಚ್ಚ ತಗ್ಗಿಸಲು ನರೇಗಾ ಯೋಜನೆಯಡಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ಸ್ವಯಂ ಪ್ರೇರಿತರಾಗಿ ತಪಾಸಣೆಗೊಳಗಾಗುವಂತೆ ಆರೋಗ್ಯ ಅಮೃತ ಅಭಿಯಾನದ ಕಲಬುರಗಿ ವಲಯ ಮುಖ್ಯಸ್ಥ ಸುರೇಶ ಮಹಾದೇವಪ್ಪ ಹೇಳಿದರು.


ತಾಲೂಕಿನ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಬಳಿಗಾರ ಊಟಿ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಸಂಭವನೀಯ ರೋಗಗಳಿಗೆ ಚಿಕಿತ್ಸೆ ಪಡೆಯಲು ಸಹಕಾರಿ


ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಕೂಲಿಕಾರರ ಅನುಕೂಲಕ್ಕಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುತ್ತಿದ್ದು, ರಕ್ತದೊತ್ತಡ, ಮಧುಮೇಹ, ಕ್ಷಯರೋಗದ ಬಗ್ಗೆ ತಪಾಸಣೆ ಮಾಡಿ ಚಿಕಿತ್ಸೆಗೆ ಸಲಹೆ ನೀಡಲಾಗುತ್ತಿದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಸ್ವಾಸ್ತ್ಯ ಆರೋಗ್ಯ ಕಾಪಾಡಲು ಸಾಧ್ಯವಿದ್ದು, ಸಂಭವನೀಯ ರೋಗಗಳಿಗೆ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ. ಆರೋಗ್ಯ ವಿಚಾರದಲ್ಲಿ ಹಿಂಜರಿಕೆ ಬಿಟ್ಟು ಸ್ವಯಂಪ್ರೇರಿತರಾಗಿ ತಪಾಸಣೆಗೊಳಗಾಗಲು ಸಲಹೆ ನೀಡಿದರು.

ರೋಜಗಾರ್ ದಿವಸ್ ಆಚರಣೆ

ಶಿಬಿರದಲ್ಲಿ 110 ಕೂಲಿಕಾರರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆಗೆ ಸಲಹೆ ನೀಡಲಾಯಿತು. ಇದೇ ಸಂದರ್ಭದಲ್ಲಿ ರೋಜಗಾರ್ ದಿವಸ್ ಆಚರಿಸಿ, ಯೋಜನೆ ಕುರಿತು ಮಾಹಿತಿ ನೀಡಲಾಯಿತು.ಯೋಜನೆ ರಾಜ್ಯ ಬೆಂಬಲ ಅಧಿಕಾರಿ ಎಲಿಜಿಬತ್, ತಾಲೂಕು ಸಂಯೋಜಕ ಶರಣಬಸವ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾಪಂ ಕಾರ್ಯದರ್ಶಿ ಸುಶೀಲಾಬಾಯಿ, ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಲಾರೆನ್ಸ್, ಸಿಬ್ಬಂದಿ ಹನುಮೇಶ, ಮಲಿಯಪ್ಪ, ಯಶೋಧಾ, ದೇವಜಾನಾಯ್ಕ ಇತರರಿದ್ದರು.