ಜಿಲ್ಲೆ

ಜೀವನದಲ್ಲಿ ಪ್ರತಿಯೊಬ್ಬರೂ ಗುರಿ ಇಟ್ಟುಕೊಳ್ಳಿ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿನ ಲಕ್ಷ್ಮೀ ನಗರದಲ್ಲಿ ನೂತನ ಜೆಇಇ, ನೀಟ್ ತರಬೇತಿ ಸೆಂಟರ್, ಮೈಲೆ (ಎಂವೈಎಲ್​ಇ) ಫೌಂಡೇಷನ್ ಸ್ಟಡಿ ಸೆಂಟರ್ ಮತ್ತು ಡಿಜಿಟಲ್ ಕ್ಲಾಸ್​ರೂಮ್ ಸೋಮವಾರ ಉದ್ಘಾಟಿಸಲಾಯಿತು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಡೀನ್ ಪ್ರೊ.ಬಿ.ಎಲ್. ದೇಸಾಯಿ ಉದ್ಘಾಟಿಸಿ ಮಾತನಾಡಿ,

ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಗುರಿ ಇಟ್ಟುಕೊಳ್ಳಬೇಕು. ಇದಕ್ಕೆ ಅವಕಾಶ, ತಯಾರಿ ಮುಖ್ಯ ಎಂದರು.

ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಉತ್ತರ ಕರ್ನಾಟಕದ ಸಾಕಷ್ಟು ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರಿನೆಡೆಗೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹ ಸಾಕಷ್ಟು ಸಂಸ್ಥೆಗಳು ಉದಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಮೈಲೆ ಫೌಂಡೇಷನ್ ಚೇರ್ಮನ್ ದೀಪಕ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಜಗದೀಶ ಶೆಟ್ಟರ್, ಪ್ರಮೋದ ಮುತ್ನಾಳ, ರವಿ ಗಲಗಲಿ, ವಸುದಾ ಮಹಿಷಿ, ವಿ.ಎಸ್. ದಯಾನಂದ, ಡಾ. ಎಸ್.ಎಸ್. ಹಿರೇಮಠ ಇತರರು ಇದ್ದರು.