ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಯೋಜನೆಯ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ವೈದ್ಯಾಧಿಕಾರಿ ಅನಂತ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್, ಆಯುಷ್ ವೈದ್ಯಾಧಿಕಾರಿ ವಿನೋದ್ ಕುಮಾರ್, ಕಂದಾಯ ಅಧಿಕಾರಿ ದೇವರಾಜ್ ಇದ್ದರು.  
ಜಿಲ್ಲೆ

ಎಲ್ಲರೂ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಿ

Gangavati - Desk - Veeresh S Ullagaddi

ಮುದಗಲ್: ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆಗೆ ಆಯುಷ್ಮಾನ್ ಭವ ಯೋಜನೆ ಸಹಕಾರಿಯಾಗಲಿದೆ ಎಂದು ವೈದ್ಯಾಧಿಕಾರಿ ಅನಂತ್ ಕುಮಾರ್ ಹೇಳಿದರು.


ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಯೋಜನೆಯ ಬಿತ್ತಿ ಪತ್ರ ಬಿಡುಗಡೆಗೊಳಿಸಿ ಬುಧವಾರ ಮಾತನಾಡಿದರು.

ಎಲ್ಲರೂ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬೇಕು. ಟಿಬಿ, ಕ್ಯಾನ್ಸರ್, ಹೆಚ್‌ಐವಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಆಯುಷ್ಮಾನ್ ಭವ ಯೋಜನೆ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ಯೋಜನೆಯ ಸದಯಪಯೋಗ ಪಡೆದುಕೊಳ್ಳಬೇಕು ಎಂದರು.


ಪುರಸಭೆಯ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್, ಆಯುಷ್ ವೈದ್ಯಾಧಿಕಾರಿ ವಿನೋದ್ ಕುಮಾರ್, ಕಂದಾಯ ಅಧಿಕಾರಿ ದೇವರಾಜ್, ಆಸ್ಪತ್ರೆಯ ಆರೋಗ್ಯ ಮಿತ್ರ ಬಸವರಾಜ್ ಬುದ್ದಿನ್ನಿ, ಸಿಬ್ಬಂದಿಗಳಾದ ಮಕ್ತುಮಸಾಬ್, ಗೌರಮ್ಮ, ರಾಜೇಶ್ವರಿ, ದೀಪಾ, ಮಹೇಶ್, ಮಹ್ಮದ್ ಇಕ್ಬಾಲ್ ಇದ್ದರು.