ಹುಸ್ಕೂರು ಆರ್​ಟಿಒ ಟೆಸ್ಟಿಂಗ್​ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು. ಚಂದಾಪುರ ಆರ್​ಟಿಒ ಅಧಿಕಾರಿ ಪ್ರಮುಖೇಶ್​, ಆರ್​.ಟಿ.ಎ.ಸಿ.ಪಿ ಶ್ರೀನಿವಾಸ್​, ಆರ್​ಟಿಒ ಎಸಿಪಿ ಶ್ರೀನಿವಾಸ್​ ಮೂರ್ತಿ, ಯುನೈಟೆಡ್​ ವೇ ಮುಂಬೈ ಸಂಸ್ಥೆಯ ತೇಜಸ್ವಿನಿ ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ

ಆನೇಕಲ್​ : ಸಂಚಾರ ನಿಯಮ ಪಾಲಿಸದೆ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಾಲಕರಿಗೆ ಬೈಕ್​ ಚಲಾಯಿಸಲು ಕೊಡುವ ಪಾಲಕರಿಗೆ ದಂಡ ವಿಧಿಸಲಾಗುವುದು ಎಂದು ಚಂದಾಪುರ ಆರ್​ಟಿಒ ಅಧಿಕಾರಿ ಪ್ರಮುಖೇಶ್​ ಹೇಳಿದರು.

ಹುಸ್ಕೂರು ಆರ್​ಟಿಒ ಕಚೇರಿಯಲ್ಲಿ ಎಸ್​ಎಫ್​ಎಸ್​ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಚಾಲನ ಪರವಾನಿಗಿಗೆ ಅರ್ಜಿ ಸಲ್ಲಿಸಿದವರಿಗೆ ನೀಡ್​ ಬೇಸ್​ ಇಂಡಿಯ, ಐವನ್ಸ್​ ಹಾಗೂ ಯುನೈಟೇಡ್​ ವೇ ಇಂಡಿಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಸ್ತೆ ಸುರಕ್ಷತೆ ಕುರಿತು ಆಯೋಜಿಸಿದ್ದ ಕಾರ್ಯಾಗಾರಾದಲ್ಲಿ ಮಾತನಾಡಿದರು. ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿಗಳು, 18 ವರ್ಷ ನೀಡಿರುವವರು ಹೆಲ್ಮೆಟ್​ ಧರಿಸಿ ಬೈಕ್​ನಲ್ಲಿ ಬರಬೇಕು. ಪೊಲೀಸರು ನೋಡುತ್ತಾರೆ, ಆರ್​ಟಿಓ ಅಧಿಕಾರಿಗಳು ನೋಡುತ್ತಾರೆ, ದಂಡ ಹಾಕುತ್ತಾರೆ ಎನ್ನುವ ಕಾರಣಕ್ಕೆ ಹೆಲ್ಮೆಟ್​ ಧರಿಸುವುದರಿಂದ ಸುರಕ್ಷತೆ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಂಚಾರ ನಿಯಮ ಪಾಲಿಸಿದರೆ ಯಾರ ಭಯವೂ ಇರುವುದಿಲ್ಲ ಎಂದರು. ನಿವೃತ್ತ ಆರ್​ಟಿಒ ಅಧಿಕಾರಿ ವೆಂಕಟೇಶ್​ ಮಾತನಾಡಿ, ವಾಹನ ಚಲಾವಣೆ ವೇಳೆ ಮೊಬೈಲ್​ ಬಳಸಬೇಡಿ, ಬೆಂಗಳೂರಿನ ಪ್ರತಿ ಸರ್ಕಲ್​ ನಲ್ಲಿ ಸಿಸಿಟಿವಿ ಹಾಕಿದ್ದಾರೆ. ಇದು ನಮ್ಮ ಸುರಕ್ಷತೆಗಾಗಿ ಹಾಕಿದ್ದಾರೆ, ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದರೆ ನಾಲ್ಕು ಬಾರಿ ದಂಡ ಹಾಕಿದ ಬಳಿಕ ಲೈಸನ್ಸ್​ ರದ್ದಾಗುತ್ತದೆ. 18 ವರ್ಷದವರೆಗೆ ಬೈಕ್​ ಚಲಾಯಿಸಬೇಡಿ, ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತದೆ ಎಂದರು.

ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಯ ಡಾ.ಶರತ್​ ಮಾತನಾಡಿ, ರಸ್ತೆ ಅಪಘಾತಗಳು ಪ್ರಪಂಚದಲ್ಲೇ ಅತೀ ಹೆಚ್ಚು ಭಾರತದಲ್ಲಿ ಆಗುತ್ತಿದ್ದು, ಇದರಿಂದ ನಮಗೆ ಗೌರವ ಬರುವ ಬದಲು ನೋವು ಹೆಚ್ಚಾಗುತ್ತದೆ. ಅಪಘಾತವಾಗಲು ರಸ್ತೆಗಳು ಸರಿಯಾಗಿಲ್ಲ ಎನ್ನುವ ಕಾರಣ ನೀಡುತ್ತಿದ್ದೇವೆ, ರಸ್ತೆಗಳು ಇತ್ತೀಚೆಗೆ ಅಭಿವೃದ್ಧಿ ಕಾಣುತ್ತಿವೆ, ಹೆದ್ದಾರಿಗಳು ಅಭಿವೃದ್ಧಿ ಆಗಿದೆ.ಆದರೆ ಮನೆಯಿಂದ ಶಾಲೆಗೆ ಹೋಗುವಾಗ ನಾವೇ ಮಕ್ಕಳಿಗೆ ಹೆಲ್ಮೆಟ್​ ಹಾಕಲು ಹೇಳುವುದಿಲ್ಲ, 18 ವರ್ಷ ಮೇಲ್ಪಟ್ಟವರು ಲೈಸನ್ಸ್​ ಸಿಕ್ಕ ನಂತರ ಹೇಗೆ ಬೇಕಾದರೂ ವಾಹನ ಚಲಾಯಿಸ ಬಹುದು ಎನ್ನುವ ಮನಸ್ಥಿತಿಯಿಂದ ದೂರ ಬರಬೇಕು ಎಂದರು.

ಎಸ್​ಎಫ್​ಎಸ್​ ಕಾಲೇಜಿನ ಎನ್​ಎಸ್​ಎಸ್​ ಡೈರೆಕ್ಟರ್​ ರಾಧಾ ಸ್ವಾಮಿ, ಕ್ರಿಶ್ಟಿನ ಮೇರಿ, ಆರ್​ಟಿಒ ಇನ್​ಸ್ಪೆಕ್ಟರ್​ ನರಸಿಂಹ ರೆಡ್ಡಿ, ನೀಡ್​ ಬೇಸ್​ ಇಂಡಿಯಾ ಸಂಸ್ಥೆಯ ರಹೀಮ್​ ಹಾಗೂ ಮಲ್ಲಿಕಾರ್ಜುನ್​, ಕಾರ್ಯಕ್ರಮದ ಆಯೋಜಕರಾದ ಬಿ.ಸರ್ದಾರ್​, ರತ್​, ನಾಗರಾಜು, ಸಂಧ್ಯಾ, ವೀರಪ್ಪ,ಗುರು ಮತ್ತು ವಿಮಲ್​ ಇದ್ದರು.

ಅಗತ್ಯ ದಾಖಲೆ ಇರಲಿ: ರಸ್ತೆ ಸುರಕ್ಷತೆ ಬಗ್ಗೆ ನಾಮಲಕಗಳನ್ನು ಹಾಕಿರುತ್ತಾರೆ, ಆದರೆ ಅದನ್ನೇ ಬ್ರೇಕ್​ ಮಾಡುತ್ತೇವೆ. ವೇಗ ಆಗಷ್ಟೇ ಖುಷಿ ಕೊಡುತ್ತದೆ, ಆದರೆ ಅಷ್ಟೇ ವೇಗವಾಗಿ ಜೀವ ಹೋಗುತ್ತದೆ, ಇದರಿಂದ ಸುರಕ್ಷತೆ ಕಾಪಾಡಿಕೊಳ್ಳಬೇಕು. ಮನೆಯಲ್ಲಿ ವಾಹನ ಇದ್ದರೆ ಲೈಸನ್ಸ್​ ಇದೆಯಾ, ಇನ್ಶುರೆನ್ಸ್​ ಇದೆಯಾ ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಇವೆರಡೂ ಇದ್ದಾಗ ವಾಹನ ಹೊರಗೆ ತೆಗೆದುಕೊಂಡು ಹೋಗುವಾಗ ದಾಖಲೆಗಳನ್ನು ಇಟ್ಟುಕೊಂಟು, ಹೆಲ್ಮೆಟ್​ ದರಿಸಿ ಬೈಕ್​ ಚಾಲನೆ ಮಾಡಬೇಕು ಎಂದು ಆರ್​.ಟಿ.ಎ.ಸಿ.ಪಿ ಶ್ರೀನಿವಾಸ್​ ಸಲಹೆ ನೀಡಿದರು.