ರಬಕವಿ-ಬನಹಟ್ಟಿ: ಪ್ರತಿಯೊಬ್ಬರು ಕನ್ನಡ ಮಾತೆಗೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ರಬಕವಿ ಬನಹಟ್ಟಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಹ್ಮದ್‌ಹುಸೇನ್ ಲೆಂಗ್ರೆ ಹೇಳಿದರು.
ರಬಕವಿ ಬನಹಟ್ಟಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಆಚರಿಸಿದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ರಬಕವಿ ಹೊಸ ಬಸ್ ನಿಲ್ದಾಣದಿಂದ 200ಕ್ಕೂ ಹೆಚ್ಚು ಆಟೋಗಳ ಮೆರವಣಿಗೆ ಮಾಡಲಾಯಿತು.
ಮಾರುತಿ ನಾಯಿಕ, ಪರಪ್ಪ ಪೂಜಾರಿ, ಉಮೇಶ ಜಗದಾಳ, ಕೆಂಪಯ್ಯ ಅಣ್ಣಾ, ಮಂಜು ಕಳ್ಳಿಮನಿ, ರವಿ ವಾಗಮೋರೆ, ವಸಂತ ಪವಾಡೆ, ಮುತ್ತಪ್ಪ ಮುತ್ತೂರು ಪಾಲ್ಗೊಂಡಿದ್ದರು.