ಜಿಲ್ಲೆ

ಪ್ರತಿ ವೃತ್ತಿಗೂ ಸಂಘಟನೆ ಅಗತ್ಯ

ವಸಂತಕುಮಾರ್ ಬಿ

ಎಚ್.ಡಿ.ಕೋಟೆ: ಹಂಪಾಪುರ ಮತ್ತು ಹೊಮ್ಮರಗಳ್ಳಿಯ ಶ್ರೀ ವಿನಾಯಕ ಟೈಲರ್ ಸಂಘದ ವಾರ್ಷಿಕೋತ್ಸವ ಹಂಪಾಪುರ ಗ್ರಾಮದ ಖಾಸಗಿ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು.

ಹಂಪಾಪುರ ಪೊಲೀಸ್ ಉಪಠಾಣಾಧಿಕಾರಿ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಉದ್ಯೋಗಕ್ಕೂ ಒಂದು ಸಂಘಟನೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಟೈಲರ್ ಸಂಘಟನೆಯು ಕಳೆದ ಒಂದು ವರ್ಷದ ಹಿಂದೆ ಆರಂಭಗೊಂಡು ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವುದರ ಜತೆಗೆ ಸಂಘಟನೆಯಲ್ಲಿರುವ ಸದಸ್ಯರ ಹಾಗು-ಹೋಗುಗಳಿಗೂ ಸ್ಪಂದಿಸುತ್ತಿರುವುದು ಸ್ವಾಗತಾರ್ಹ. ಅಲ್ಲದೆ ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘಟನೆಯು 75 ಸಾವಿರ ರೂ. ಉಳಿಸಿಕೊಂಡು ಬಂದಿದೆ ಎಂಬುದು ಸಂತಸದ ವಿಚಾರ ಎಂದರು.

ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರ ಬರಹಗಾರ ನರಸಿಂಹೇಗೌಡ, ಮೈಸೂರಿನ ಟೈಲರ್ ಚನ್ನನಾಯಕ, ತಾಲೂಕು ಅಧ್ಯಕ್ಷ ರಂಗಸ್ವಾಮಿ, ಪ್ರಕಾಶ್, ಸುನಿಲ್ ಕುಮಾರ್, ವಿಷಕಂಠಶೆಟ್ಟಿ, ಕಾರ್ಯದರ್ಶಿ ಶಿವು, ಸಂಘಟನಾ ಕಾರ್ಯದರ್ಶಿ ಪ್ರಭು ಇದ್ದರು. ಇದೇ ವೇಳೆ ಕಾರ್ಮಿಕ ಅಭಿವೃದ್ಧಿ ಟ್ರಸ್ಟ್ ವತಿಯಿಂದ 10 ಜನ ಟೈಲರ್‌ಗಳನ್ನು ಗೌರವಿಸಲಾಯಿತು. ಪುಟ್ಟಮಾದು, ಜಗದೀಶ, ರಮೇಶ, ಮಲ್ಲೇಶ, ವೆಂಕಟೇಶ್, ಮಾದೇವ್, ವೀರಭದ್ರ ಇತರರು ಇದ್ದರು.