ಕಂಪ್ಲಿ: ಜೀವನದಲ್ಲಿ ತ್ಯಾಗ ಮನೋಭಾವ ಅಳವಡಿಸಿಕೊಂಡರೆ ಬ್ರಹ್ಮಜ್ಞಾನ ಲಭಿಸುತ್ತದೆ ಎಂದು ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ಬಿಎಸ್‌ವಿ ಶಾಲಾವರಣದಲ್ಲಿ ಆಯೋಜಿಸಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಸರ್ಕಾರ ಪ್ರಜೆಗಳ ಅಂತಃಸತ್ವ ಹೆಚ್ಚಿಸಲು ಜಾನ್ಞ, ಧ್ಯಾನ, ತಪಸ್ಸುಗಳ ಪುರುಷಾರ್ಥಗಳನ್ನು ಒದಗಿಸುವಲ್ಲಿ ಯೋಜನೆಗಳನ್ನು ರೂಪಿಸಬೇಕು. ಪ್ರಜೆಗಳ ನ್ಯಾಯಯುತ ಆಶಯ ಈಡೇರಿಕೆಗೆ ಶ್ರಮಿಸಬೇಕು. ಕಾನೂನಿನಲ್ಲಿ ಅನೈತಿಕತೆಗೆ ಅವಕಾಶವಿದ್ದರೂ ನೈತಿಕತೆಯನ್ನೇ ಆಯ್ದುಕೊಳ್ಳಬೇಕು.
ಪ್ರತಿ ಮನೆಯಲ್ಲೂ ಗ್ರಂಥಾಲಯ ಇಟ್ಟುಕೊಳ್ಳಬೇಕು. ರಾಮಕೃಷ್ಣ-ವಿವೇಕಾನಂದ ಆಶ್ರಮ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಎಮ್ಮಿಗನೂರಿನ ಜಡೆಯ್ಯಸ್ವಾಮಿ, ಪ್ರಮುಖರಾದ ಬಳ್ಳಾರಿ ರವೀಂದ್ರನಾಥ ಶ್ರೇಷ್ಠಿ, ಅಂಬಿಗರ ಮಂಜುನಾಥ, ಟಿ.ವಿ.ಸುದರ್ಶನರೆಡ್ಡಿ, ಚಿಕ್ಕಜಾಯಿಗನೂರು ಜಿ.ಅಮರೇಗೌಡ, ಕೆ.ರಂಗಪ್ಪ, ಸಿದ್ದೇಶ್ ಇತರರಿದ್ದರು.