ಜಿಲ್ಲೆ

ರಟ್ಟಿಹಳ್ಳಿಯಲ್ಲಿ ನಿತ್ಯ ಕಸ ವಿಸಿ

Haveri

ರಟ್ಟಿಹಳ್ಳಿ: ಘನತ್ಯಾಜ್ಯ ಸಂಸ್ಕರಣ ಘಟಕಕ್ಕೆ ನಿವೇಶನ ಕೊರತೆಯಿಂದಾಗಿ ಕಸ ಸಾಗಣೆ ವಿಷಯ ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ನೂತನ ತಾಲೂಕು ಕೇಂದ್ರವಾಗಿ 3 ವರ್ಷಗಳೇ ಕಳೆದಿವೆ. ಪಪಂ ವ್ಯಾಪ್ತಿಯಲ್ಲಿ ಸೂಕ್ತ ಘನ ತ್ಯಾಜ್ಯ ನಿರ್ವಹಣಾ ಘಟಕ ಇಲ್ಲ. ಇದರಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳ ಬದಿ ತಿಪ್ಪೆಗಳ ರಾಶಿಯೇ ಗೋಚರಿಸುತ್ತಿದೆ. ಅನೇಕ ವರ್ಷಗಳಿಂದ ಪಟ್ಟಣದ ತಾವರಗಿ ರಸ್ತೆಯಲ್ಲಿನ ಖಾಸಗಿ ಜಮೀನಿನ ಪಕ್ಕದ ದೊಡ್ಡ ಕಂದಕ ದಲ್ಲಿ ಕಸ ವಿಲೇವಾರಿ ಮಾಡ ಲಾಗುತ್ತಿತ್ತು. ಇತ್ತೀಚೆಗೆ ಆ ಜಮೀನಿನ ಮಾಲೀಕರು ಕಸ ಚಲ್ಲದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ, ಇದೇ ರಸ್ತೆಯ ಕವಳಿಕುಪ್ಪಿ ಕ್ರಾಸ್ ಸಮೀಪ ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಇಲ್ಲಿಯೂ ಕಸ ಹಾಕದಂತೆ ಅಕ್ಕಪಕ್ಕದ ಜಮೀನುಗಳ ಮಾಲೀಕರು ಮನವಿ ಮಾಡುತ್ತಿದ್ದಾರೆ. ಇದರಿಂದ ಪಪಂ ಸಿಬ್ಬಂದಿಗೆ ಕಸ ವಿಲೇವಾರಿಯದ್ದೇ ಚಿಂತೆಯಾಗಿದೆ.

ನಿವೇಶನ ಕೊರತೆ: ಪ್ರತಿ ಪಪಂಗೆ ಒಂದು ಘನತ್ಯಾಜ್ಯ ಸಂಸ್ಕರಣ ಘಟಕ ವ್ಯವಸ್ಥೆಯಿದೆ. ಘಟಕದ ವ್ಯವಸ್ಥೆಗೆ ಸರ್ಕಾರದಿಂದ ಕನಿಷ್ಠ 5 ಎಕರೆ ಭೂಮಿ ಬೇಕು. ಪಟ್ಟಣದ ಸುತ್ತಮುತ್ತ ನಿವೇಶನದ ಕೊರತೆ ಇರುವುದರಿಂದ ಘಟಕ ಸ್ಥಾಪನೆಗೆ ಸಮಸ್ಯೆಯಾಗಿದೆ. ಜಮೀನು ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಏಕೈಕ ವಾಹನ: ಕಳೆದ ಹತ್ತು ವರ್ಷಗಳಿಂದ ಕಸ ವಿಲೇವಾರಿಗೆ ಒಂದೇ ಟ್ರಾ್ಯಕ್ಟರ್ ಬಳಸಲಾಗುತ್ತಿದೆ. ಅದೂ ಬಾಡಿಗೆ ಟ್ರ್ಯಾಕ್ಟರ್. ಪಟ್ಟಣ ದಿನೇ ದಿನೆ ಬೆಳೆಯುತ್ತಿದ್ದು, ಕಸ ವಿಲೇವಾರಿಗೆ ಒಂದು ವಾಹನ ಸಾಲುತ್ತಿಲ್ಲ. ಈ ಕುರಿತು ಒಂದು ಟ್ರ್ಯಾಕ್ಟರ್, ಎರಡು ಆಟೋ ಟಿಪ್ಪರ್ ಒದಗಿಸುವಂತೆ ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಪಪಂನಿಂದ ಪತ್ರ ಬರೆಯಲಾಗಿದೆ. ಆದರೆ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಮಳಗಿ ಬಳಿ ಸ್ಥಳ ಪರಿಶೀಲಿಸಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕರು ರಸ್ತೆ ಬದಿ ಕಸ ಹಾಕಬಾರದು. ಕಸ ವಿಲೇವಾರಿಗೆ ಹೆಚ್ಚುವರಿ ವಾಹನಗಳ ಅವಶ್ಯಕತೆಯಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು.| ಉಮೇಶ ಗುಡ್ಡದ ಪಪಂ ಮುಖ್ಯಾಧಿಕಾರಿ
ಕಸ ವಿಲೇವಾರಿ ಘಟಕಕ್ಕೆ ಸಂಬಂಧಿಸಿ ಪಟ್ಟಣ ಪಂಚಾಯಿತಿಯಿಂದ ಮಾಹಿತಿ ಕೇಳಲಾಗಿದೆ. ತಹಸೀಲ್ದಾರ್ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಸರ್ಕಾರಿ ಭೂಮಿ ಬಗ್ಗೆ ರ್ಚಚಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು.| ವಿಜಯಕುಮಾರ ಗುಡಗೇರಿಕಂದಾಯ ನಿರೀಕ್ಷಕ