ಜಿಲ್ಲೆ

ರಾಷ್ಟ್ರಕ್ಕಾಗಿ ಮಾಡುವ ಚಿಕ್ಕ ಕೆಲಸವೂ ದೇಶ ಸೇವೆ

ಮಂಜುನಾಥ ತಿಮ್ಮಯ್ಯ

ಮೈಸೂರು: ದೇಶ ಸೇವೆ ಎಂದರೆ ಸೈನಿಕನಾಗಿ ಗಡಿ ಕಾಯುವುದಷ್ಟೇ ಅಲ್ಲ, ರಾಷ್ಟ್ರಕ್ಕಾಗಿ ಚಿಕ್ಕ ಕೆಲಸ ಮಾಡುವುದು ಸಹ ದೇಶ ಸೇವೆಯೇ ಎಂದು ಭಾರತೀಯ ನೌಕದಳದ ನಿವೃತ್ತ ಯೋಧ, ರೋಟರಿ ಜಿಲ್ಲೆ 3181ರ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಹೇಳಿದರು.


ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಸಮಿತಿ, ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಸಹಯೋಗದಲ್ಲಿ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸೇನೆಯಲ್ಲಿರುವುದಷ್ಟೇ ದೇಶ ಪ್ರೇಮವಲ್ಲ. ದೇಶದ ಒಳಿತಿಗಾಗಿ ವಾಡುವ ಕೆಲಸವೆಲ್ಲವೂ ದೇಶ ಪ್ರೇಮವೇ. ಯಶಸ್ಸು ಎಂದರೆ ದುಡ್ಡು ವಾಡುವುದಷ್ಟೇ ಅಲ್ಲ. ದೇಶಕ್ಕಾಗಿ ಸೇವೆ ಮಾಡಬೇಕು. ಸೈನಿಕರನ್ನು ಸಮಾಜ ಗೌರವಿಸಬೇಕು ಎಂದರು.


ದೇಶ ಸೇವೆಗಾಗಿ ಭಾರತೀಯ ಸೇನೆಗೆ ಸೇರಿಕೊಳ್ಳಬೇಕು ಎಂದು ಬಹಳಷ್ಟು ಹೇಳುತ್ತಾರೆ. ಆದರೆ, ಆರ್ಥಿಕ ಸಂಕಷ್ಟ, ಶಿಕ್ಷಣ ಮುಂದುವರಿಕೆಗಾಗಿ ನಾನು 1983ರಲ್ಲಿ ಭಾರತೀಯ ನೌಕಪಡೆಗೆ ಸೇರ್ಪಡೆಗೊಂಡಿದ್ದೆ. ಈ ಮೂಲಕ ನಮ್ಮ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದೆ. ಭಾರತೀಯ ಸೇನೆ ಸೇರಿದ ಬಳಿಕ ಶಿಸ್ತು, ದೇಶ ಪ್ರೇಮ ಕಲಿತುಕೊಂಡೆ ಎಂದು ಸ್ಮರಿಸಿಕೊಂಡರು.


ದೇಶದ ಮೇಲೆ ಮೊಘಲರು, ಪೋರ್ಚ್‌ಗೀಸರು, ಬ್ರಿಟಿಷರು ಸೇರಿದಂತೆ ವಿದೇಶಿ ಆಕ್ರಮಣಕಾರರು ದಾಳಿ ಮಾಡಿದ್ದಾರೆ. ಪಾಕಿಸ್ತಾನವೂ ದಾಳಿ ಮಾಡಿ ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು. ನಾವುಗಳೆಲ್ಲ ಸಮುದ್ರ ಮಟ್ಟದಿಂದ 2,500 ಅಡಿ ಎತ್ತರದಲ್ಲಿ ಜೀವಿಸುತ್ತಿದ್ದೇವೆ. ಕಾರ್ಗಿಲ್ ಯುದ್ಧವು ಸಮುದ್ರ ಮಟ್ಟದಿಂದ 15 ಸಾವಿರ ಅಡಿ ಎತ್ತರದಲ್ಲಿ ಕ್ಲಿಷ್ಟಕರ ವಾತಾವರಣದ ಪರಿಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಮ್ಮ 527 ಯೋಧರು ಹುತಾತ್ಮರಾದರು ಎಂದು ಸ್ಮರಿಸಿದರು.


ಹುತಾತ್ಮ ಯೋಧರಿಗೆ ಪ್ರಶಸ್ತಿ, ಗೌರವ, ಆರ್ಥಿಕ ಸಹಾಯ, ಜಾಗ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿಯಂತಹ ಸವಲತ್ತುಗಳು ದೊರೆಯುತ್ತವೆ ಎಂಬುದು ನಿಜ. ಆದರೆ, ತಾಯಿಗೆ ಮಗ, ಹೆಂಡತಿಗೆ ಗಂಡ, ಮಕ್ಕಳಿಗೆ ತಂದೆಯನ್ನು ಕಳೆದುಕೊಂಡ ನೋವು ಸದಾ ಇರುತ್ತದೆ ಎಂದರು.


ವಾಜಿ ಶಾಸಕ ಎಂ.ಕೆ.ಸೋಮಶೇಖರ್ ವಾತನಾಡಿ, ದೇಶಕ್ಕಾಗಿ ಹಗಲಿರುಳು ಸೇವೆ ಮಾಡುವ, ಯುದ್ಧ ಕಾಲದಲ್ಲಿ ಪ್ರಾಣ ತ್ಯಾಗ ಮಾಡುವ ಸೈನಿಕರನ್ನು ಸಮಾಜ ಗೌರವಿಸಬೇಕು. ತಂದೆ-ತಾಯಿ ಎಷ್ಟು ಮುಖ್ಯವೋ ಅಷ್ಟೇ ಭಾರತೀಯ ಸೇನೆ, ಸೈನಿಕರು ಸಹ ಮುಖ್ಯ. ಅವರ ಶ್ರಮ ತ್ಯಾಗದ ಲವಾಗಿ ನಾವು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು.


ಕಾರ್ಗಿಲ್ ಯದ್ಧದಲ್ಲಿ ನೂರಾರು ಸೈನಿಕರು ಜೀವ ಕಳೆದುಕೊಂಡರು. ಕಾರ್ಗಿಲ್ ವಿಜಯ ದಿವಸ ತ್ಯಾಗ, ಐಕ್ಯತೆ, ದೇಶಭಕ್ತಿಯ ಸಂಕೇತವಾಗಿದೆ ಎಂದರು


ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರಾದ ಸಿ.ಮಂಜುನಾಥ್, ಎಂ.ಮಹದೇವ, ಪಿ.ಬಿ.ರವಿ ಕುಶಾಲ್, ವಾಸ್ತಿ ಗೌಡ ಅವರನ್ನು ಸನ್ಮಾನಿಸಲಾಯಿತು. ಗಾಯಕರಾದ ತನುಶ್ರೀ, ಅಶ್ವಿನ್ ಪ್ರಭು, ನದೀಂ ಪಾಷಾ ದೇಶಭಕ್ತಿಗೀತೆಗಳನ್ನು ಹಾಡಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ವಾತನಾಡಿದರು. ಮುಡಾ ವಾಜಿ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ಭಾರತೀಂು ವಾಯುಪಡೆಂು ನಿವೃತ್ತ ಲೆಫ್ಟಿನೆಂಟ್ ರೀಧಿ ಸಿಂಗ್, ಅಖಿಲ ಕರ್ನಾಟಕ ವಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ನಂಜುಂಡಸ್ವಾಮಿ, ಉಪಾಧ್ಯಕ್ಷ ನೀಲಕಂಠ ಕುಮಾರ ರೆಡ್ಡಿ, ರೋಟರಿ ಕ್ಲಬ್ ಆ್ ಹೆರಿಟೇಜ್ ಮೈಸೂರು ಸಂಸ್ಥಾಪಕ ಅಧ್ಯಕ್ಷ ಕೆ.ಮಂಜುನಾಥ್, ರೋಟರಿ ಕ್ಲಬ್ ಆ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್.ರಾಜೇಶ್, ಕಾರ್ಯದರ್ಶಿ ಸುಂದರ ರಾಜ, ರೋಟರಿ ಕ್ಲಬ್ ವಲಯ-8 ರ ಸಹಾಯಕ ಪ್ರಾಂತಪಾಲ ಎಂ.ರಾಜೀವ್, ವಲಯ ಸೇನಾನಿ ಕಿರಣ್ ಕುಮಾರ್ ಇನ್ನಿತರರಿದ್ದರು.
ಇದಕ್ಕೂ ಮುನ್ನ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಸಭಾ ಕಾರ್ಯಕ್ರಮದ ಸ್ಥಳದ ವರೆಗೂ ಬೈಕ್ ರ‌್ಯಾಲಿ ನಡೆಯಿತು.