ಅರಣ್ಯ ಇಲಾಖೆ ಹುತಾತ್ಮ ಸಿಬ್ಬಂದಿ ಸ್ಮಾರಕಕ್ಕೆ ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಪುಷ್ಪಗುಚ್ಛ ಸಮರ್ಪಿಸಿದರು.  
ಜಿಲ್ಲೆ

ಹುತಾತ್ಮರಾದರೂ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ

Shivamogga - Desk - Vinayakumar D B

ಶಿಕಾರಿಪುರ: ನಮ್ಮ ಉಸಿರಿಗೆ ಕಾರಣ ಅರಣ್ಯ. ನಮ್ಮ ಬದುಕಿಗೆ ಪೂರಕ ಅರಣ್ಯ. ಇದು ನಮ್ಮ ಪಾಲಿಗೆ ತೆರೆದ ಖಜಾನೆ. ಇಂತಹ ಅರಣ್ಯ ರಕ್ಷಣೆಗಾಗಿ ತಮ್ಮ ಪ್ರಾಣ ಸಮರ್ಪಣೆ ಮಾಡಿ ಹುತಾತ್ಮರಾದವರು ವಿಶ್ವದಲ್ಲಿ ಭಾರತದವರೇ ಹೆಚ್ಚು ಎಂದು ತಹಸಿಲ್ದಾರ್ ಮಲ್ಲೇಶ್ ಬಿ.ಪೂಜಾರ್ ಹೇಳಿದರು.

ನಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ಸ್ಮರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿ ಮಾತನಾಡಿದ ಅವರು, ಕಾಡಿದ್ದರೆ ನಾಡು. ಕಾಡಿಲ್ಲದಿದ್ದರೆ ನಮ್ಮ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ಸದಾ ಅಮೃತದಂತಹ ಆಮ್ಲಜನಕ ನೀಡಿ ನಮಗೆ ಬದುಕು ನೀಡುವ ಕಾಡಿಗೆ ಬೆಂಕಿ ಹತ್ತಿದಾಗ, ಕಾಡುಗಳ್ಳರಿಂದ ರಕ್ಷಣೆ ಮಾಡುವಾಗ ಬೇಟೆಗಾರರಿಂದ ಮತ್ತು ಮಾನವ ವನ್ಯಜೀವಿ ಸಂಘರ್ಷದ ಸಮಯ ಸೇರಿದಂತೆ ಇನ್ನೂ ಅನೇಕಾನೇಕ ಸಂದರ್ಭದಲ್ಲಿ ನಮ್ಮ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡುತ್ತಾರೆ. ಎಷ್ಟೋ ಬಾರಿ ಅವರು ಹುತಾತ್ಮರಾದಾಗ ಅವರ ಇಡೀ ಕುಟುಂಬವೇ ಅನಾಥವಾಗುತ್ತದೆ. ಆದರೂ ಅವರು ತಮ್ಮ ಕರ್ತವ್ಯನಿಷ್ಠೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ಹುತಾತ್ಮ ಅರಣ್ಯಸಿಬ್ಬಂದಿ ಕಳಕಳಿ, ಕಾಡಿನ ಮೇಲಿರುವ ಅವರ ಪ್ರೇಮ, ವನ್ಯಜೀವಿಗಳ ಜತೆಗಿರುವ ಅವರ ಸಂಬಂಧಗಳು ಅನನ್ಯ. ಅವರ ಸೇವೆಯನ್ನು ಮತ್ತು ಸಾವನ್ನು ನೆನೆದಾಗ ಕಂಗಳು
ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಮಾತನಾಡಿ, ಕಾಡು ಬೆಳೆಸದೇ ಕಾಡು ಕಡಿಯುವ ಹಕ್ಕು ಯಾರಿಗೂ ಇಲ್ಲ. ಮಳೆಗಾಲದಲ್ಲಿ ಮನೆಗೆ ಎರಡು ಗಿಡಗಳನ್ನು ನೆಡಿ. ಊರಿಗೊಂದು ವನ ಮಾ. ಕಾಡನ್ನು ಕಡಿಯದಂತೆ ಸಂಕಲ್ಪ ಮಾಡಿ. ಆಗ ಸಮೃದ್ಧ ಕಾಡು ಉಳಿಯುತ್ತದೆ. ಕಡಿತಲೆಯಿಂದ ಮಲೆನಾಡು ಬಯಲುನಾಡಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕಾರಿಪುರ ಮತ್ತು ಅಂಬ್ಲಿಗೊಳ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.