ಮಹಾಲಿಂಗಪುರದ ಶ್ರೀ ವಿದ್ಯಾಶ್ರೀ ಮಹಿಳಾ ಸ್ವಸಹಾಯ ಸಂಘದಿಂದ ಆಯೋಜಿಸಿದ್ದ ಮಾತ ವಂದನಾ ಕಾರ್ಯಕ್ರಮದಲ್ಲಿ ಕುಬಸದಗಲ್ಲಿಯ ಮಕ್ಕಳು ತಾಯಂದಿರ ಪಾದಪೂಜೆ ಮಾಡಿದರು.ಜೇಸಿ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ,ಸಂಗಪ್ಪ ಹಳ್ಳೂರ ಇದ್ದರು. 
ಜಿಲ್ಲೆ

ಸುರಿಯುವ ಮಳೆಯಲ್ಲೇ ಮಾತ ವಂದನೆ, ಜನಮನ ಗೆದ್ದ ಕಾರ್ಯಕ್ರಮ

ಮಹಾಲಿಂಗಪುರ : ಸುರಿಯುತ್ತಿದ್ದ ಮಳೆಯಲ್ಲಿಯೇ ತಾಯಂದಿರ ಪಾದ ಪೂಜೆ ಮಾಡಿದ ಸ್ಥಳೀಯ ಕುಬಸದಗಲ್ಲಿಯ ಮಕ್ಕಳು ಅರ್ಥಪೂರ್ಣವಾಗಿ ವಿಶ್ವ ತಾಯಂದಿರ ದಿನ ಆಚರಿಸಿ ಪ್ರಶಂಸೆಗೆ ಪಾತ್ರರಾದರು.

ಶ್ರೀ ವಿದ್ಯಾಶ್ರೀ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಕುಬಸದ ಗಲ್ಲಿಯಲ್ಲಿ ಆಯೋಜಿಸಿದ್ದ ಮಾತ ವಂದನಾ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ತಮ್ಮ ತಮ್ಮ ತಾಯಂದಿನ್ನು ಕುರ್ಚಿಯ ಮೇಲೆ ಕೂಡಿಸಿ ತಾಯಂದಿರ ಪಾದಗಳಿಗೆ ವಿಭೂತಿ, ಕುಂಕುಮ, ಊದುಬತ್ತಿ ಹಚ್ಚಿ ಹಣೆಮಣೆದು ಆಶೀರ್ವಾದ ಪಡೆಯಬೇಕೆನ್ನುವಷ್ಟರಲ್ಲಿ ವರುಣದೇವನೂ ಸಹ ಸಂತುಷ್ಟನಾಗಿ ಜೋರಾಗಿ ಮಳೆ ಸುರಿದನು, ಮಳೆಯಿಂದ ಸಂಪೂರ್ಣ ನೆನೆಯಿತ್ತಿದ್ದರೂ ಮಕ್ಕಳು ಹಿಂಜರಿಯದೇ ಮತ್ತಷ್ಟು ಉತ್ಸುಕರಾಗಿ ಪಾದ ಪೂಜೆ ಮಾಡಿ ಕತಾರ್ಥರಾದರು, ಮುದ್ದು ಮಕ್ಕಳ ಮಾತ ಭಕ್ತಿ ಹಾಗೂ ವರುಣ ದೇವನ ಮಳೆಯ ಸಿಂಚನದಿಂದ ವುೂಕವಿಸ್ಮಿತರಾದ ತಾಯಂದಿರು ಹದಯ ತುಂಬಿ ಹಾರೈಸುವ ಮೂಲಕ ಕಾರ್ಯಕ್ರಮ ಮಾದರಿಯಾಗಿ ಸರ್ವರ ಶ್ಲಾಘನೆಗೆ ಕಾರಣವಾಯಿತು.

ಶಿಕ್ಷಕರಾದ ಸಿದ್ಧಾರೂಢ ಮುಗಳಖೋಡ, ನಾರನಗೌಡ ಉತ್ತಂಗಿ ಮಾತನಾಡಿದರು, ಜೆಸಿ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಬಾಗಲಕೋಟೆ ಜಿಲ್ಲಾ ನೇಕಾರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಪ್ಪ ಹಳ್ಳೂರ ವೇದಿಕೆ ಮೇಲಿದ್ದರು. ಕಲಾವಿದ ರಾಜು ಗಲಗಲಿ ಮಾತ ಭಕ್ತಿಯ ಗೀತೆಗಳನ್ನು ಹಾಡಿದರು.

ಗಿರಿಮಲ್ಲ ಯರಗಡ್ಡಿ, ಸಿದ್ದಪ್ಪ ವನಹಳ್ಳಿ, ಮಹಾಲಿಂಗ ಹನಗಂಡಿ, ಮಂಜು ಹಳ್ಳೂರ, ಚಂದ್ರು ಯರಗಟ್ಟಿ, ಮಲ್ಲು ಹುಣಶ್ಯಾಳ, ಪ್ರಕಾಶ ಬಿಲಕುಂದ, ಅಡಿವೆಪ್ಪ ಹುಣಶ್ಯಾಳ, ಮಹಾದೇವ ಗಲಗಲಿ, ಮಹಾಲಿಂಗ ನಡಕಟ್ನಿ, ಶ್ರೀಕಾಂತ ಜಗದಾಳ, ಶಂಕರ ಪಂಕಿ ಮುಂತಾದವರ ನೇತತ್ವದಲ್ಲಿ ಆಯೋಜಿದ್ದ ಕಾರ್ಯಕ್ರಮ ನೆರೆದವರ ಮನ ಮಿಡಿಯುವಲ್ಲಿ ಯಶಸ್ವಿಯಾಯಿತು. ನೂರಾರು ತಾಯಂದಿರು, ಮಕ್ಕಳು ಮತ್ತು ಇತರರಿದ್ದರು.