ಮೂಡಿಗೆರೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾಧಕರಿಗೆ ಸಾಹಿತ್ಯ ಸಿರಿ ಕನ್ನಡ ಸಿರಿ ಸಂಘಟನಾ ಚತುರ ಮತ್ತು ಕನ್ನಡಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನ ಅಧ್ಯಕ್ಷ ಹಳೇಕೋಟೆ ರಮೇಶ್, ಸೂರಿ ಶ್ರೀನಿವಾಸ್, ಹಿರೇಮಗಳೂರು ಕಣ್ಣನ್, ಎಚ್.ಎಂ.ಶಾಂತಕುಮಾರ್, ಬಿ.ಎಸ್.ಜಯರಾಮ್, ಮಗ್ಗಲಮಕ್ಕಿ ಗಣೇಶ್, ಮಂಚೇಗೌಡ, ಜೆ.ಎಸ್.ರಘು ಇತರರಿದ್ದರು.  
ಜಿಲ್ಲೆ

ಆಧುನಿಕಕ್ಕೆ ಆಕರ್ಷಿತರಾದರೂ ಕನ್ನಡ ಮರೆಯದಿರಿ

ಮೂಡಿಗೆರೆ: ಕನ್ನಡಕ್ಕಾಗಿ ತ್ಯಾಗ ಮಾಡಿದ ಮಹನೀಯರ ಚರಿತ್ರೆ ಮರೆತುಬಿಡುವ ಮಟ್ಟಿಗೆ ಆಧುನಿಕತೆ ಸೃಷ್ಟಿಯಾಗಿದೆ. ಯುವ ಜನಾಂಗ ಆಧುನಿಕತೆಯತ್ತ ಆಕರ್ಷಿತರಾದರೂ ಕನ್ನಡದ ಅಸ್ಮಿತೆ ಮರೆಯಬಾರದು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ಶನಿವಾರ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ಕಾಫಿ ನಾಡಿನಲ್ಲಿ ಸಾಹಿತ್ಯಕ್ಕೆ ಕೊರತೆಯಿಲ್ಲ. ಕನ್ನಡ ಬೆಳೆಸಬಲ್ಲ ಜನಪದ ಕಲೆ ಎಲ್ಲೆಡೆ ಹರಡಿದೆ. ಕಾಫಿ ನಾಡಿನ ಯಾವ ಮೂಲೆಯಲ್ಲಿ ಕಣ್ಣಾಡಿಸಿದರೂ ಹಸಿರು ಸೌಂದರ್ಯದ ಗಣಿಯಿದೆ. ರಾಷ್ಟ್ರಕವಿ ಕುವೆಂಪು, ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಮಲೆನಾಡಿನ ಸೌಂದರ್ಯವನ್ನು ಅಳೆದೂ ತೂಗಿ ಸಾಹಿತ್ಯ ರಚಿಸಿದ್ದಾರೆ. ಮಲೆನಾಡಿನ ಸೊಬಗನ್ನು ಸವಿದರೆ ಕನ್ನಡದ ಕಂಪು ಇತರ ಭಾಷಿಕರನ್ನು ಆಕರ್ಷಿಸುತ್ತದೆ ಎಂದು ಗುಣಗಾನ ಮಾಡಿದರು.
ಸಮ್ಮೇಳನಾಧ್ಯಕ್ಷ ಹಳೇಕೋಟೆ ರಮೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಭೆಯಿದೆ. ಅದನ್ನು ಹೆಕ್ಕಿ ತರುವ ಪ್ರಯತ್ನಕ್ಕೆ ಕಸಾಪ ಮುಂದಾಗಬೇಕು. ಸಾಹಿತ್ಯ ಚಿಗುರಿದರೆ ಕನ್ನಡದ ಮೇಲಿನ ವಾತ್ಸಲ್ಯಕ್ಕೆ ಕೊರತೆ ಉಂಟಾಗಲಾರದು. ವಿದೇಶದಲ್ಲಿರುವ ಕನ್ನಡಿಗರು ಒಂದೆಡೆ ಸೇರಿ ಅಕ್ಕ ಸಮ್ಮೇಳನದಂಥ ಜಾಗತಿಕ ಮಟ್ಟದ ಸಮ್ಮೇಳನ ಆಯೋಜಿಸಿ ಜಗತ್ತಿಗೆ ಕನ್ನಡದ ಕಂಪನ್ನು ಹರಡುತ್ತಾರೆ. ಆದರೆ ಕರ್ನಾಟಕದಲ್ಲಿರುವ ಕನ್ನಡ ಭಾಷಿಕರು ಮಾತ್ರ ಮಾತೃಭಾಷೆ ಮೇಲೆ ಆಸಕ್ತಿ ಇಲ್ಲದಂತೆ ಇತರ ಭಾಷೆ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಿರುವುದು ದುರಂತ ಎಂದರು.
ಡಾ. ಸಿ.ಕೆ.ಸುಬ್ಬರಾಯ ಅವರಿಗೆ ಕನ್ನಡ ಸಿರಿ ಪ್ರಶಸ್ತಿ, ಡಿ.ಎಚ್.ನಟರಾಜ್ ಅವರಿಗೆ ಸಂಘಟನಾ ಚತುರ ಪ್ರಶಸ್ತಿ, ಡಾ. ಎ.ಎಸ್.ಶಂಕರನಾರಾಯಣ ಮತ್ತು ದೀಪ ಹಿರೇಗುತ್ತಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಡಾ. ನಮನ ಬೆರಣಗೋಡು, ಸಾ.ನ.ರಮೇಶ್, ರಾಮಸುಬ್ಬರಾಯ, ಜಿ.ರೇವಣ್ಣ, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಎಚ್.ಪಿ.ಮಲ್ಲಿಕಾರ್ಜುನ್, ಎಂ.ಆರ್.ಜಗದೀಶ್, ವಿ.ಕೆ.ರಘು, ಮಿಲ್ಟ್ರಿ ಶ್ರೀನಿವಾಸ್, ಬಕ್ಕಿ ಮಂಜುನಾಥ್, ನಾ.ಸುರೇಶ್, ನೆ.ಲ.ಸುಬ್ರಹ್ಮಣ್ಯ, ಎಸ್.ಪ್ರಶಾಂತ್, ಶ್ರೀಲಕ್ಷ್ಮೀ ಹೊನ್ನವಳ್ಳಿ, ಎಂ.ಎನ್.ಕಾಂತರಾಜ್, ಹಸೈನರ್ ಬಿಳಗುಳ, ಜುಬೇದಾ ಅಕ್ಬರ್ ಅಲಿ, ವೈ.ಪ್ರೇಮ್‌ಕುಮಾರ್, ವಿ.ಸಜ್ಜನರಾವ, ಹ.ಪುಟ್ಟಸ್ವಾಮಿ, ಕವಾಲಿ ಸೋಮಶೇಖರ್ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಸಚಿವೆ ಮೋಟಮ್ಮ ಅವರ ಜನಪದ ಹಾಡು ನೆರೆದಿದ್ದವರನ್ನು ರಂಜಿಸಿತು. ಡಿ.ಎಚ್.ನಟರಾಜ್, ಸೂರಿ ಶ್ರೀನಿವಾಸ್, ಬಿ.ಎಸ್.ಜಯರಾಂ, ಮಂಚೇಗೌಡ, ಜೆ.ಎಸ್.ರಘು, ಮಗ್ಗಲಮಕ್ಕಿ ಗಣೇಶ್, ಶೃಂಗೇರಿ ಸುಬ್ಬಣ್ಣ, ನವೀನ್ ಪೆನ್ನಯ್ಯ, ಲತಾ ರಾಜಶೇಖರ್, ಅಂಗುರ್ಡಿ ದಿನೇಶ್, ಎಸ್.ಎಸ್.ವೆಂಕಟೇಶ್, ಜೆ.ಬಿ.ಪವನ್, ಬಿ.ಪ್ರಕಾಶ್, ಎಚ್.ಎಂ.ಶಾಂತಕುಮಾರ್, ಸಿಂಗಟಗೆರೆ ಸಿದ್ದಪ್ಪ, ಸತೀಶ್ ಅಂದಿನಕೂಡಿಗೆ ಇತರರಿದ್ದರು.