ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಆವರಣದ ನೆಲ ಅಗೆದು ಇಟ್ಟಿದ್ದ ಅನ್ನ ಕೆಡದಿರುವುದು. 
ಜಿಲ್ಲೆ

ಒಂದು ವರ್ಷವಾದರೂ ಅಳಿಸದ ಅನ್ನ

ಸಿಂಧನೂರು: ತಾಲೂಕಿನ ಒಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತಮಠದ ಆವರಣದಲ್ಲಿ ಕಳೆದ ವರ್ಷ ನೆಲ ಅಗೆದು ಇಡಲಾಗಿದ್ದ ಅನ್ನ ಕೆಡದೆ ಉಳಿದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಕಳೆದ ವರ್ಷ ಫೆ.18ರಂದು ಶ್ರೀ ಒಳಬಳ್ಳಾರಿ ಚನ್ನಬಸವ ಶಿವಯೋಗಿಗಳ ಜಾತ್ರೋತ್ಸವ ಮುಗಿದ ಬಳಿಕ ಶ್ರೀ ಮಠದ ಆವರಣದಲ್ಲಿ ನೆಲದ ಅಗೆದು ವಿಶೇಷ ಪೂಜೆ ಸಲ್ಲಿಸಿ ಬಿಸಿಯಾದ ಅನ್ನ ಇಡಲಾಗಿತ್ತು.

ಈ ವರ್ಷ ಫೆ.4ರಂದು ಜಾತ್ರೆ ಹಿನ್ನೆಲೆಯಲ್ಲಿ ಅವರಾತ್ರಿ ಅಮಾವಾಸ್ಯೆ ದಿನವಾದ ಬುಧವಾರ ಅಲಬನೂರು ಭಕ್ತರು ನೆಲ ಅಗೆದು ಅನ್ನವನ್ನು ಹೊರ ತೆಗೆದಾಗ ಸುವಾಸನೆ ಜತೆಗೆ ಅನ್ನ ಕೆಟ್ಟಿಲ್ಲ.

ಇದನ್ನು ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ ಬಳಿ ಭಕ್ತರು ಹೇಳಿಕೊಂಡಾಗ ಇದು ಶ್ರೀ ಚನ್ನಬಸವ ಶಿವಯೋಗಿಗಳ ಪವಾಡ ಎಂದಿದ್ದಾರೆ. ಭಕ್ತರು ಈ ಅನ್ನವನ್ನು ತಮ್ಮ ಜಮೀನುಗಳಿಗೆ ಚೆಲ್ಲುವ ಮೂಲಕ ಬೆಳೆ ಸಮೃದ್ಧವಾಗಿರಲಿ ಎಂದು ಪ್ರಾರ್ಥಿಸಿದ್ದಾರೆ.