ಜಿಲ್ಲೆ

ಪ್ರಾಣ ಹೋದರೂ ಶೇ.15ರಷ್ಟು ಮೀಸಲಾತಿ ಜಾರಿಗೆ ಬಿಡಲ್ಲ

ಶಿವಮೊಗ್ಗ: ಸರ್ಕಾರ ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ ಜಾರಿಗೆ ತರುವುದಕ್ಕೆ ಪ್ರಾಣ ಹೋದರೂ ಬಿಡುವುದಿಲ್ಲ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಶಿವಪ್ಪನಾಯಕ ವೃತ್ತದಲ್ಲಿ ಬುಧವಾರ ಪ್ರತಿಭಟನೆಯಲ್ಲಿ ಮಾತನಾಡಿ, ಮೀಸಲಾತಿ ಹಿಂಪಡೆಯದಿದ್ದರೆ ಜೈಲ್ ಭರೋ ಚಳವಳಿ ನಡೆಸಲಾಗುವುದು. ರಾಜ್ಯಾದ್ಯಂತ ಮನೆ ಮನೆಗೆ ಹೋಗಿ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ನಾವೆಲ್ಲರೂ ಸುಮ್ಮನೆ ಕುಳಿತರೇ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿರುವ ಪ್ರತಿಮೆ ತೆಗೆದು ಔರಂಗಜೇಬನ ಪ್ರತಿಮೆ ತಂದು ಕೂರಿಸುತ್ತಾರೆ. ನಾವೇನಾದರೂ ಸುಮ್ಮನೆ ಕುಳಿತರೆ ಕೇಸರಿ ಶಾಲು ಬದಲು ಬುರ್ಖಾ ಹಾಕಿಕೊಳ್ಳುವ ಪರಿಸ್ಥಿತಿ ಬರಲಿದೆ. ಸಿದ್ದರಾಮಯ್ಯ ಅವರೇ ನಿಮ್ಮ ಪತ್ನಿಗೂ ಬುರ್ಖಾ ಹಾಕುವ ಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿದ್ದರೆ, ಅವರನ್ನು ಟೀಕಿಸುತ್ತ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದ ಟಿವಿಗಳಲ್ಲಿ ಹೀರೋ ಆಗುತ್ತಿದ್ದಾರೆ. ರಾಜ್ಯದಲ್ಲಿ ಕೋಮುಗಲಭೆ ತಡೆಗೆ ವಿಶೇಷ ಕಾನೂನು ತಂದಿದ್ದು, ಮೊದಲಿಗೆ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನೇ ಜೈಲಿಗೆ ಕಳುಹಿಸಬೇಕು. ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ದೇಶ ಬಿಟ್ಟೇ ಓಡಿಸಬೇಕು ಎಂದು ತಿಳಿಸಿದರು.