ಹನೂರು: ತಾಲೂಕಿನ ಮಾರ್ಟಳ್ಳಿ ಚರ್ಚ್ ಆವರಣದಲ್ಲಿ ಬುಧವಾರ ಫಾದರ್ ಸಂತಿಯಾಗು ಮತ್ತು ಪ್ರಕಾಶ್ ಅವರು ವಾಹನಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಆಯುಧಪೂಜೆ ಮಾಡಿದರು.
ಆಯುಧಪೂಜೆ ಹಿನ್ನೆಲೆ ಹಿಂದುಗಳು ವಾಹನಗಳಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಮಾರ್ಟಳ್ಳಿ ಗ್ರಾಮದಲ್ಲಿ ಕ್ರಿಶ್ಚಿಯನ್ನರು ಸಹ ಸೈಕಲ್, ಬೈಕ್, ಕಾರು, ಲಾರಿ ಇನ್ನಿತರ ವಾಹನಗಳನ್ನು ಶುಚಿಗೊಳಿಸಿ ಪುಷ್ಪಗಳಿಂದ ಸಿಂಗರಿಸಿ ಧರ್ಮಗುರುಗಳಿಂದ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡುವುದರ ಮೂಲಕ ಪೂಜೆ ನೆರವೇರಿಸಿದರು. ಈ ವೇಳೆ ಧರ್ಮಗುರುಗಳು ಪ್ರಾರ್ಥಿಸಿ ಶುಭವಾಗಲೆಂದು ಹಾರೈಸಿದರು.