ಬೆಳಗಾವಿಯಲ್ಲಿ ಕಷಿ ಪದವೀಧರ ಸಂಘವನ್ನು ಗೃಹ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದರು. ಸಚಿವ ಸತೀಶ ಜಾರಕಿಹೊಳಿ ವಿನಯ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ಗ್ರಾಮಮಟ್ಟದಲ್ಲಿಯೂ ಕೆಲಸ ಮಾಡಲಿ

ಶಂಕರ ಗೆಜ್ಜಿ

ಬೆಳಗಾವಿ: ರಾಜಕೀಯ ಕ್ಷೇತ್ರಕ್ಕೆ ಬರುವವರು ಬನ್ನಿ, ನಾವು ಕೈಲಾದಮಟ್ಟಿಗೆ ಸಹಾಯ ಮಾಡುತ್ತೇವೆ ಎಂದು ಗಹ ಸಚಿವ ಜಿ ಪರಮೇಶ್ವರ ಹೇಳಿದರು.

ನಗರದಲ್ಲಿ ಗುರುವಾರ ಕಷಿ ಪದವೀಧರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಂಘ, ಸಂಸ್ಥೆಗಳು ಅಸ್ತಿತ್ವಕ್ಕೆ ಬಂದ ನಂತರ ಉಪಯುಕ್ತ ಕಾರ್ಯ ಮಾಡಬೇಕು. ಗ್ರಾಮೀಣ ಅಭಿವದ್ಧಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಹೊಸ ಆವಿಷ್ಕಾರ ಮಾಡಿದೆ. ಅದನ್ನು ಕಷಿ ಪದವೀಧರ ಸಂಘಕ್ಕೂ ಕಳಿಸುತ್ತೇನೆ. ಅದನ್ನು ತಿಳಿದುಕೊಂಡು ಗ್ರಾಮಮಟ್ಟದಲ್ಲಿಯೂ ಸಂಘ ಕೈಜೋಡಿಸಿ ಕೆಲಸ ಮಾಡಬಹುದು ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ದೇಶ, ವಿದೇಶ ಸುತ್ತಾಡಿ ಸ್ವಗ್ರಾಮದಲ್ಲಿ ಕಷಿ ಮಾಡಿ ಲಕ್ಷಾಂತರ ರೂ. ಲಾಭಗಳಿಸುತ್ತಿದ್ದಾರೆ. ಕಷಿ ಪದವೀಧರರು ಈಗ ಸಂಘಟಿತರಾಗಿದ್ದು, ಸಮಾಜಮುಖಿ ಕಾರ್ಯ ಮಾಡಲಿ ಎಂದು ಹಾರೈಸಿದರು.

ಅಗ್ರಿ ಗ್ರ್ಯಾಜ್ಯುವೇಟ್ ಅಸೋಸಿಯೇಷನ್ ಸಂಘದ ಕಾರ್ಯಾಧ್ಯಕ್ಷ ರಾಜಾಸಲೀಂ ಕಾಶಿಮನವರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ವಿನಯ ಕುಲಕರ್ಣಿ, ಸಂಘದ ಗೌರವ ಅಧ್ಯಕ್ಷ ಬಾಬಾಸಾಹೇಬ್ ಪಾಟೀಲ ವಿ.ಪ ಸದಸ್ಯ ನಾಗರಾಜ್ ಯಾದವ್ ಇತರರಿದ್ದರು.