ಸೊರಬದ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಉದ್ಘಾಟಿಸಿದರು. ರಾಮಪ್ಪ, ಕಾಳಿಂಗರಾಜ್, ಗಣಪತಿ, ತುಳಜಪ್ಪ, ಶ್ರೀಧರ್ ಶೇಟ್ ಇತರರಿದ್ದರು.  
ಜಿಲ್ಲೆ

ಅಲ್ಪ ಸೇವೆಯೂ ದೊಡ್ಡದಿದ್ದಂತೆ: ಎನ್.ಕುಮಾರ್

Shivamogga - Desk - Megha MS

ಸೊರಬ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಆರ್‌ಎಲ್‌ಡಿಎವಿ ಸೇವಾ ಟ್ರಸ್ಟ್ ಅಧ್ಯಕ್ಷ ಎನ್.ಕುಮಾರ್ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಮಂಗಳವಾರ ಆರ್‌ಎಲ್‌ಡಿಎವಿ ಸೇವಾ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಸಂಪಾದನೆಯ ಒಂದು ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ಇಂದು ಪ್ರಜ್ಞಾವಂತರೇ ಪಾಲಕರನ್ನು ವೃದ್ಧಾಶ್ರಮಗಳಿಗೆ ಬಿಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಕಷ್ಟ-ಸುಖಗಳ ನಡುವೆ ಬಡವನಾದರೂ ಪಾಲಕರೊಂದಿಗೆ ಜೀವನ ಸಾಗಿಸುತ್ತಾನೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.
ಆರ್‌ಎಲ್‌ಡಿಎವಿ ಸೇವಾ ಟ್ರಸ್ಟ್ನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತç, ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಅವರು ನೋಟ್ ಬುಕ್ ಮತ್ತು ಪೆನ್‌ಗಳನ್ನು ವಿತರಿಸಿದರು. ಮಲೆನಾಡು ಸಿರಿ ಸೇವಾ ಟ್ರಸ್ಟ್ ಪ್ರಮುಖರಾದ ರಾಜು ಹಿರಿಯಾವಲಿ ಶಿಕ್ಷಕರನ್ನು ಅಭಿನಂದಿಸಿದರು.
ನವಚೇತನ ಬುದ್ಧಿಮಾಂದ್ಯ ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಜಿ.ಬಿ.ರಾಮಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಸ್.ಕಾಳಿAಗರಾಜ್, ಪ್ರಮುಖರಾದ ಗಣಪತಿ, ತುಳಜಪ್ಪ, ಶ್ರೀಧರ್ ಶೇಟ್, ಕೃಷ್ಣಪ್ಪ ಓಟೂರು, ಆರ್.ಕುಮಾರ್, ಪುನೀತ್, ಶಿಕ್ಷಕರಾದ ಕೆ.ಬಿ.ಪುಟ್ಟರಾಜು, ಎಸ್.ರವೀಂದ್ರ, ಎಚ್.ಆರ್.ಸುವರ್ಣ, ಮಂಗಳಾ ಎಸ್. ಸುರೇಶ್, ಪಲ್ಲವಿ ಇತರರಿದ್ದರು.