ಕೆ.ಕರಿಯಪ್ಪ 
ಜಿಲ್ಲೆ

ಶಿಷ್ಟಾಚಾರ ನಿಯಮ ಉಲ್ಲಂಘನೆ

ನರೇಶ್ ಕುಮಾರ್

ಸಿಂಧನೂರು: ತಾಲೂಕಿನಲ್ಲಿ ಶಾಸಕರು ಮಾಡಬೇಕಿರುವ ಭೂಮಿಪೂಜೆ, ಕಾರ್ಯಕ್ರಮ ಉದ್ಘಾಟನೆ ಇನ್ನೊಬ್ಬರು ಮಾಡುತ್ತಾರೆ. ಇಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ಎಂದು ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಕೆ.ಕರಿಯಪ್ಪ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿಷ್ಟಾಚಾರದ ಬಗ್ಗೆ ನಿಯಮದ ದಾಖಲೆಗಳು ನೀಡುವಂತೆ ಹಿಂದಿನ ತಹಸೀಲ್ದಾರ್‌ರಿಂದಲೂ ಕೇಳುತ್ತ ಬಂದಿದ್ದು, ಕೊಡುತ್ತಿಲ್ಲ ಎಂದು ದೂರಿದರು.

ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ವೆಂಕೋಬ ನಾಯಕ ಮಾತನಾಡಿ, ಸಿಂಧನೂರಿನಲ್ಲಿ ಶಾಸಕದ್ವಯರಿಂದ ಅಧಿಕಾರಿಗಳು ಹಿಂಸೆ ಅನುಭವಿಸುತ್ತಿದ್ದಾರೆ. ಯಾರ ಮಾತು ಕೇಳಿದ್ರೂ ತಪ್ಪಾಗುತ್ತಿದೆ. ಇದರಿಂದ ಅಭಿವೃದ್ಧಿ ಕೆಲಸಗಳಿಗೂ ತೊಡಕಾಗುತ್ತಿದೆಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ ಎಂದ ಅವರು, ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಶಾಸಕರು ಸುಡಾಕ್ಕೆ ಅವಕಾಶ ನೀಡಬೇಕಿತ್ತು ಎಂದು ತಿಳಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ ಮಾತನಾಡಿ, ನಗರಸಭೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಫಾರ್ಮ್ ನಂ.3, ಕಟ್ಟಡ ಪರವಾನಗಿ ಸಿಗದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳ ಮೇಲೆ ದರ್ಪ ತೋರುವುದು ಸರಿಯಲ್ಲ ಎಂದರು. ಪ್ರಮುಖರಾದ ಪರಮೇಶ್ವರಪ್ಪ ದಢೇಸುಗೂರು, ಬಸವರಾಜ ಇದ್ದರು.