ಗಂಗಾವತಿ: ಮಾಹಿತಿಗಳ ಅರಿವು ಮತ್ತು ಓದುವ ಆಸಕ್ತಿ ಹೆಚ್ಚಿಸುವುದುಕ್ಕಾಗಿ ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗೊಂದು ಅರಿವು ಮತ್ತು ಮಾಹಿತಿ ಕೇಂದ್ರಗಳಿದ್ದು, ಗ್ರಂಥಾಲಯಗಳನ್ನು ಆರಂಭಿಸಲಾಗಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.
ಇದನ್ನೂ ಓದಿ: ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆರಿಗೆ ಪಾವತಿಗೆ ಮುಂದಾದ ಜಿಲ್ಲಾ ಪಂಚಾಯತ್ / ತೆರಿಗೆ ಸಂಗ್ರಹಕ್ಕೆ ವಿಶೇಷ ಅಭಿಯಾನ
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್.ರಂಗನಾಥ್ ಜನ್ಮದಿನಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯಗಳು ಡಿಜಿಟಲ್‌ಗಳಾಗಿದ್ದು, ಸಮಗ್ರ ಮಾಹಿತಿ ಪಡೆಯಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಂಡಿರುವ ಯುವ ಸಮೂಹ ಗ್ರಂಥಾಲಯಗಳ ಉಪಯೋಗ ಪಡೆದುಕೊಳ್ಳಿ ಎಂದರು.
ಬಾಲಕರ ಸ.ಪ.ಪೂ.ಕಾಲೇಜಿನ ಗ್ರಂಥಪಾಲಕ ರಮೇಶ ಗಬ್ಬೂರ್ ವಿಶೇಷ ಉಪನ್ಯಾಸ ನೀಡಿದರು. ತಾಲೂಕಿನ ಆನೆಗೊಂದಿ ಗ್ರಂಥಪಾಲಕ ವೆಂಕಟೇಶ ಆನೆಗೊಂದಿಯನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಅಧ್ಯಕ್ಷ ಡಾ.ವೆಂಕಟೇಶ ಬಾಬು, ತಾಪಂ. ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಪಿಡಿಒಗಳಾದ ಇಂದಿರಾ, ಗೌಸ್ ಮುಲ್ಲಾ, ರವೀಂದ್ರ ಕುಲ್ಕರ್ಣಿ, ಗ್ರಂಥ ಪಾಲಕರ ಸಂಘದ ತಾಲೂಕಾಧ್ಯಕ್ಷ ಪರಶುರಾಂ ಕಟ್ಟಿಮನಿ, ಉಪಾಧ್ಯಕ್ಷೆ ವಿರುಪಮ್ಮ, ಟಾಟಾ ಕಲಿಕಾ ಟ್ರಸ್ಟ್ ಸಂಯೋಜಕ ಸತ್ಯರಾಜು, ರಾಜೀವ್ ಗಾಂಧಿ ಪಂಚಾಯತ್‌ರಾಜ್ ೆಲೋ ಸುಮಿತ್ರಾ ಇತರರಿದ್ದರು.
ಶ್ರೀರಾಮನಗರ: ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸ.ಪ.ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಗ್ರಂಥಾಲಯಗಳು ಸಮಾಜದ ಅಜ್ಞಾನ ನಿವಾರಣೆಯ ಔಷಧಾಲಯಗಳಾಗಬೇಕು. ವಿದ್ಯಾರ್ಥಿಗಳು ಪಠ್ಯದ ಕಲಿಕೆಯಾಚೆಗಿನ ಓದಿಗಾಗಿ ಗ್ರಂಥಾಲಯಗಳನ್ನು ಆಶ್ರಯಿಸಬೇಕು. ನಿಮ್ಮ ಸ್ನೇಹಿತರಂತೆ ಗ್ರಂಥಗಳನ್ನು ಪ್ರೀತಿಸಿದರೆ ಉತ್ತಮ ಜ್ಞಾನಾರ್ಜನೆ ನೆರವಾಗಲಿದೆ ಎಂದರು.
ಸಹಪ್ರಾಧ್ಯಾಪಕ ಡಾ.ಸರ್ರಾಜ್ ಅಹ್ಮದ್ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ರವಿಕುಮಾರ, ಸಹಾಯಕ ಪ್ರಾಧ್ಯಾಪಕರಾದ ಕೆ.ವಿರುಪಾಕ್ಷ, ವೀರೇಶ, ಎಂ.ಶಂಕ್ರಪ್ಪ, ಉಪನ್ಯಾಸಕರಾದ ಪೀರಾವಲಿ, ಅರ್ಜುನ್, ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ, ಚಿನ್ನ ವರಪ್ರಸಾದ್, ಶರಣಬಸವ, ಶಾಂತಿ ಇತರರಿದ್ದರು.