ಬೆಂಗಳೂರು:ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ( ಎಂಎಸ್ಎಂಇ) ಸೂಕ್ತ ಕೌಶಲಾಧರಿತ ತರಬೇತಿ ನೀಡುವ ಉದ್ದೇಶದಿಂದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ( ಎನ್ಎಸ್ಐಸಿ)ದ ಕೌಶಲ ತರಬೇತಿ ಕೇಂದ್ರವನ್ನು ರಾಜ್ಯಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ( ಕಾಸಿಯಾ) ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ "ಸಂವಾದ' ಕಾರ್ಯಕ್ರಮದಲ್ಲಿ ಮೇಲಿನ ವಿಷಯವನ್ನು ತಿಳಿಸಿದರು. ದೇಶದಲ್ಲೇ ಮುಂಬೈನಲ್ಲಿ ಮಾತ್ರ ಎನ್ಎಸ್ಐಸಿ ಕೌಶಲ ತರಬೇತಿ ಕೇಂದ್ರವಿದೆ. ಬೇರೆ ಕಡೆ ಎಲ್ಲೂ ಇಲ್ಲ. ಉನ್ನತ ಕೌಶಲಕ್ಕಾಗಿ ಪ್ರತಿ ಬಾರಿಯೂ ಅಲ್ಲಿಗೆ ಹೋಗಿ ಬರಲು ಎಂಎಸ್ಎಂಇ ಉದ್ದಿಮೆದಾರರಿಗೆ ಕಷ್ಟವಾಗುತ್ತಿದೆ. ದಣ ಭಾರತದಲ್ಲಿ ಹೊಸದಾಗಿ ಎನ್ಎಸ್ಐಸಿ ಕೌಶಲ ತರಬೇತಿ ಕೇಂದ್ರ ಉದ್ದೇಶಿಸಲಾಗಿದ್ದು, ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯ ಎಂಬ ಹೆಗ್ಗಳಿಕೆ ಹೊಂದಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 10 ಸಾವಿರ ಚದರಡಿಯಲ್ಲಿ ಎನ್ಎಸ್ಐಸಿಯಿಂದ ಉತಷ್ಟ ಕೇಂದ್ರ ತೆರೆಯಲಾಗುವುದು.ಈ ಬಗ್ಗೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದರು.
ನಾಲ್ಕು ವೇತನ ಸಂಹಿತೆಗಳ ರಚನೆ, ರಾಷ್ಟ್ರೀಯ ಎಂಎಸ್ಎಂಇ ಮಂಡಳಿಗೆ ಕಾಸಿಯಾವನ್ನು ಸೇರ್ಪಡೆಗೆ ಒಪ್ಪಿಗೆ ಕೊಟ್ಟಿದ್ದೇನೆ. ಕಾಸಿಯಾ ಪದಾಧಿಕಾರಿಗಳು ಸಲ್ಲಿಸಿರುವ ಸಮಗ್ರ ಮನವಿಗಳನ್ನು ಕ್ಯಾಬಿನೆಟ್ ದರ್ಜೆಯ ಸಚಿವರ ಗಮನಕ್ಕೆ ತಂದು ಪಸರಿಸುವ ಕೆಲಸವನ್ನು ಮಾಡುತ್ತೇನೆ. ಎಂಎಸ್ಎಂಇ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ಅರಿತುಕೊಂಡಿದೆ. ಸುಧಾರಣೆಗೆ ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದೆ.ಸಣ್ಣ ಕೈಗಾರಿಕೆಗಳು ಅಭಿವೃದ್ಧಿಯಾದರೆ ಮಾತ್ರ ವಿಕಸಿತ ಭಾರತ ಸಾಧ್ಯ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವೆ ಹೇಳಿದರು. ಕಾಸಿಯಾ ಉಪಾಧ್ಯಕ್ಷ ಬಿ.ಆರ್. ಗಣೇಶ್ರಾವ್, ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಸಾಗರ್, ಜಂಟಿ ಕಾರ್ಯದರ್ಶಿರಾದ ಜೆ. ಎಸ್.ಬಾಬು,ಸತೀಶ್ ಮತ್ತಿತರರಿದ್ದರು.
ಕೇಂದ್ರ ಸಚಿವೆಗೆ ಮನವಿ ಸಲ್ಲಿಕೆ:
ರಾಜ್ಯದಲ್ಲಿ ಎಂಎಎಸ್ಎಂಇ ಬಲವರ್ಧನೆಗೆ ಪ್ರತ್ಯೇಕ ನೀತಿ, ಕಾರ್ಮಿಕ ಕಾನೂನುಗಳಿಂದ ವಿನಾಯಿತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಚೌಕಟ್ಟು ಅಡಿ "ಒಂದು ರಾಷ್ಟ್ರ ಒಂದು ವೇತನ' ನೀತಿ ಜಾರಿಗೆ ತರವುದು ಸೇರಿ ಇತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಕೇಂದ್ರ ಸಚಿವೆಗೆ ಮನವಿ ಮಾಡಿದರು. ರಾಜ್ಯದಲ್ಲಿ ಶೇ.96ರಷ್ಟು ಕೈಗಾರಿಕೆಗಳು, ಖಾಸಗಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವುಗಳಿಗೆ ಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಹಾಗಾಗಿ, ಕೈಗಾರಿಕಾ ಪ್ರದೇಶವನ್ನು ಮೂಲ ಸೌಕರ್ಯದೊಂದಿಗೆ ಅಭಿವೃದ್ಧಿಪಡಿಸಬೇಕು. ನಮ್ಮ ಸಂವು 75 ವರ್ಷಗಳಿಂದ ಕೈಗಾರಿಕೆಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜತೆಗೆ ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ರಾಷ್ಟ್ರೀಯ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಂಡಳಿಯಲ್ಲಿ ಸದಸ್ಯತ್ವ ನೀಡುವಂತೆ ಕಾಸಿಯಾ ಪದಾಧಿಕಾರಿಗಳು ಮನವಿ ಮಾಡಿಕೊಂಡರು.