ವಿಜಯಪುರ: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಕಮಾಂಡ್ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂದಿಂದ 25 ಲ ರೂಗಳ ದೇಣಿಗೆ ಚೆಕ್ನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ$್ಮಣ ನಿಂಬರಗಿಗೆ ಹಸ್ತಾಂತರಿಸಲಾಯಿತು.
ಸಿದ್ದಸಿರಿ ಸೌಹಾರ್ದ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರ ನಗರವು ಇಂದು ಬೃಹದಾಕಾರವಾಗಿ ಬೆಳೆದಿದೆ. ಅದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಾರ್ವಜನಿಕರ ಸುರತೆಯಿಂದ ಈ ಸಂಚಾರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದರು.
ಅಪಘಾತಗಳ ತಡೆ, ಸುಧಾರಿತ ಸಂಚಾರ ಕಣ್ಗಾವಲು ವ್ಯವಸ್ಥೆಗಳು, ಪ್ರಮುಖ ವೃತ್ತಗಳ ಮೇಲ್ವಿಚಾರಣೆ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಮತ್ತು ಸಂಯೋಜಿತ ಸಂವಹನ ಸೌಲಭ್ಯ ಒಳಗೊಂಡ ಸಂಚಾರ ಕಮಾಂಡ್ ಕೇಂದ್ರವನ್ನು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲು ಆರ್ಥಿಕ ನೆರವು ಕೋರಿ ಈ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ 25 ಲ ರೂ. ದೇಣಿಗೆ ನೀಡಲಾಗಿದೆ ಎಂದರು.
ಸಂದ ನಿರ್ದೇಶಕರಾದ ಪ್ರಭುಗೌಡ ದೇಸಾಯಿ, ಜಗದೀಶ ತ್ರಿ, ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಬಾ ಖಂಡಾಗಳೆ, ಮಹಾಪ್ರಬಂಧಕ ಉಮೇಶ ಹಾರಿವಾಳ ಮತ್ತಿತರರಿದ್ದರು.
ಸಂಚಾರ ಕಮಾಂಡ್ ಕೇಂದ್ರ ಸ್ಥಾಪಿಸಲು ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂದಿಂದ ನೀಡಿದ 25 ಲ ರೂಗಳ ದೇಣಿಗೆ ಚೆಕ್ನ್ನು ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಅವರು ಎಸ್ಪಿ ಲಕ್ಷ$್ಮಣ ನಿಂಬರಗಿ ಅವರಿಗೆ ಹಸ್ತಾಂತರಿಸಿದರು. ಪ್ರಭುಗೌಡ ದೇಸಾಯಿ, ಜಗದೀಶ ತ್ರಿ, ಜ್ಯೋತಿಬಾ ಖಂಡಾಗಳೆ ಮತ್ತಿತರರಿದ್ದಾರೆ.