ಹೆಬ್ರಿ: ಪಡುಕುಡೂರಿನಲ್ಲಿ ಸ್ವಾತಂತ್ರೃ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಹೆಸರಿನಲ್ಲಿ ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಇತ್ತೀಚೆಗೆ ಸ್ಥಾಪಿಸಲಾಯಿತು.
ಗೌರವಾಧ್ಯಕ್ಷರಾಗಿ ಉದ್ಯಮಿ ಪಡುಪರ್ಕಳ ಹರೀಶ ಶೆಟ್ಟಿ, ಅಧ್ಯಕ್ಷರಾಗಿ ಪಡುಕುಡೂರು ಪಟೇಲರ ಮನೆ ಸಂದೀಪ ಶೆಟ್ಟಿ, ಉಪಾಧ್ಯಕ್ಷ ಸಚಿನ್ ಪೂಜಾರಿ ಮೇಲ್ಮನೆ, ಕಾರ್ಯದರ್ಶಿ ರಕ್ಷಣ್ ಶೆಟ್ಟಿ ಆಚೆಬೆಟ್ಟು, ಜತೆ ಕಾರ್ಯದರ್ಶಿ ಪ್ರಣಯ್ ಶೆಟ್ಟಿ ಚಿಕ್ಮಾರಬೆಟ್ಟು, ಕೋಶಾಧಿಕಾರಿ ನಾಗರಾಜ ಪೂಜಾರಿ, ಜತೆ ಕೋಶಾಧಿಕಾರಿ ಪ್ರಥಮ್ ಶೆಟ್ಟಿ ನಡೀಬೆಟ್ಟು, ಆಂತರಿಕ ಲೆಕ್ಕಪರಿಶೋಧಕರಾಗಿ ನಾಗೇಶ ಆಚಾರ್ಯ ಕೆಳಮನೆ ಪಡುಕುಡೂರು ಮತ್ತು ಮಾಧ್ಯಮ ಸಲಹೆಗಾರರಾಗಿ ಪತ್ರಕರ್ತ ಖಜಾನೆ ಸುಕುಮಾರ್ ಆಚಾರ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಮನೋಹರ ಶೆಟ್ಟಿ ದೊಡ್ಮನೆ, ಚಂದ್ರಶೇಖರ ಶೆಟ್ಟಿ ಚಿಕ್ಕಮಾರಬೆಟ್ಟು, ಹೃದಯ ಕುಮಾರ್ ಶೆಟ್ಟಿ ಕೊಡಂಜ, ಉದಯ ಪೂಜಾರಿ ತಿಮ್ಮೊಟ್ಟು, ಜನಾರ್ದನ ಆಚಾರ್ಯ ಹೊಸೊಕ್ಲು, ಅಶೋಕ ಎಂ.ಶೆಟ್ಟಿ ಮೇಲ್ಬೆಟ್ಟು, ಅರುಣ್ ಶೆಟ್ಟಿ ಮತ್ತಾವು, ಜಯಕರ ಶೆಟ್ಟಿ ಕೊಡಂಜ, ರವಿ ಶೆಟ್ಟಿ ನೆಕ್ಕಾರ್ ಬೆಟ್ಟು, ಜ್ಯೋತಿ ಪ್ರಸಾದ್ ಶೆಟ್ಟಿ ಕಂಬಳಬಾಕ್ಯಾರು ಅವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಪ್ರಸನ್ನ ಶೆಟ್ಟಿ ಜಯಲೀಲಾ, ನಾರಾಯಣ ಆಚಾರ್ಯ, ಸುಧೀರ್ ಶೆಟ್ಟಿ, ಆದರ್ಶ್ ಶೆಟ್ಟಿ, ಹರೀಶ ಪೂಜಾರಿ, ವಸಂತ ಶೆಟ್ಟಿ, ಸಂತೋಷ ಪೂಜಾರಿ, ಸುಶಾಂತ್, ಅವಿನಾಶ್, ಸುಕೇಶ್ ಶೆಟ್ಟಿ, ತಮ್ಮಣ್ಣ ಶೆಟ್ಟಿ ಮೇಲ್ಬೆಟ್ಟು, ಜಗದೀಶ ಶೆಟ್ಟಿ ಆಚೆಬೆಟ್ಟ, ಭಾರಾವಿ ಶೆಟ್ಟಿ ಪಟೇಲರ ಮನೆ, ವಿಕೇತ್ ಶೆಟ್ಟಿ, ಸಂದೇಶ್ ಅಣ್ಣಿ ಶೆಟ್ಟಿ, ಸಂತೋಷ್ ಶೆಟ್ಟಿ, ನಿಖಿನ್ ಎಸ್.ಶೆಟ್ಟಿ, ರಾಜೇಶ್ ಆಚಾರ್ಯ, ನಾಗರಾಜ ಆಚಾರ್ಯ, ಕಾರ್ತಿಕ್ ಪೂಜಾರಿ, ಸುಮಂತ್ ಶೆಟ್ಟಿ, ನಿತೇಶ್ ಪರ್ಸರಬೆಟ್ಟು, ಅರುಣ್ ಪೂಜಾರಿ ಕುಂಜೋಲಿಗೆ, ನಿಶಾಂತ್ ಪರ್ಸರಬೆಟ್ಟು, ಶ್ರೀಧರ ಆಚಾರ್ಯ, ಸಂತೋಷ್ ಶೆಟ್ಟಿ ಗರ್ಧರಬೆಟ್ಟು, ರಾಘವೇಂದ್ರ ಆಚಾರ್ಯ ಗರ್ಧರಬೆಟ್ಟು ಆಯ್ಕೆಯಾದರು.
ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಪ್ರತಿಷ್ಠಾಪನೆ ಮುಂದಾಳತ್ವ ವಹಿಸಿದ್ದ ಪಡುಪರ್ಕಳ ಶಂಕರ ಶೆಟ್ಟಿ ಹಾಗೂ ಪ್ರಮುಖರಾದ ಸದಾಶಿವ ಉಪಾದ್ಯಾಯ ಸೂರಿಮಣ್ಣು, ಜಗದೀಶ ಹೆಗ್ಡೆ ಪಟೇಲರಮನೆ, ಶಂಕರ ಶೆಟ್ಟಿ ಪೂಜಾ ಮುನಿಯಾಲು, ದಿವಾಕರ ಶೆಟ್ಟಿ ಕೊಡಂಜ, ಮಾತಿಬೆಟ್ಟು ಪ್ರಕಾಶ ಪೂಜಾರಿ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ ಪ್ರಮುಖರು ಮಾರ್ಗದರ್ಶನ ನೀಡಿದರು.