ಜಿಲ್ಲೆ

ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆ: ಸರ್ಕಾರಕ್ಕೆ ಧನ್ಯವಾದ

ಮಡಿಕೇರಿ: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮಂಡಿಸಿದ ಬಜೆಟ್‌ನಲ್ಲಿ ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿ ಪ್ರಸಕ್ತ ಸಾಲಿನಲ್ಲಿ ೧೦೦ ಕೋಟಿ ಅನುದಾನ ನೀಡಲಾಗುವುದು ಎಂದು ಘೋಷಣೆ ಮಾಡಿದ ಹಿನ್ನೆಲೆ ಅಖಿಲ ಭಾರತ ಕ್ರೈಸ್ತ ಮಹಾ ಸಭಾ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜರವರು ಪ್ರಕಟಣೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.


ನಿಜಕ್ಕೂ ಈ ಘೋಷಣೆ ಕ್ರೈಸ್ತರಿಗೆ ಸಿಕ್ಕ ದೊಡ್ಡ ಗೆಲುವಾಗಿದೆ. ಅಲ್ಲದೆ ಪ್ರಸ್ತುತ ಕ್ರೈಸ್ತರ ನಡೆಯುತ್ತಿರುವ ದಬ್ಬಾಳಿಕೆ, ಚರ್ಚ್‌ಗಳ ಮೇಲೆ ದಾಳಿ, ಮತಾಂತ ಎಂಬ ಆರೋಪ ಮಾಡುತ್ತಿರುವ ದಿನದಲ್ಲಿ ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರ ಮೂಲಕ ಕ್ರೈಸ್ತರ ಅಭಿವೃದ್ಧಿಗೆ ಮತ್ತು ಉನ್ನತ ಶಿಕ್ಷಣ, ಸಾಲ ಸೌಲಭ್ಯ, ಚರ್ಚ್‌ಗಳ ಜೀರ್ಣೋದ್ಧಾರ ಅನುಕೂಲವಾಗಲಿದೆ. ವಿಶೇಷವಾಗಿ ಕ್ರೈಸ್ತರಿಗೆ ಸಕಾಲದಲ್ಲಿ ಎಲ್ಲಾ ರೀತಿಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.


ಅಖಿಲ ಭಾರತ ಕ್ರೈಸ್ತ ಮಹಾಸಭದ ಸಂಸ್ಥಾಪಕ ಅಧ್ಯಕ್ಷ ಪ್ರಜ್ವಲ್ ಸ್ವಾಮಿರವರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಪರವಾಗಿ ಸರ್ಕಾರಕ್ಕೆ ಸತತವಾಗಿ ಮನವಿ ಸಲ್ಲಿಸಿ ಪ್ರತ್ಯೇಕವಾಗಿ ಕರ್ನಾಟಕ ಕ್ರೈಸ್ತರ ಅಭಿವೃದ್ದಿ ನಿಗಮ ಸ್ಥಾಪನೆಗಾಗಿ ಪಟ್ಟು ಇಟ್ಟಿತ್ತು. ಆದರೆ, ಇಂದು ಸಿದ್ದರಾಮಯ್ಯರವರು ನಿಮಗ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇದು ಅಖಿಲ ಭಾರತ ಕ್ರೈಸ್ತ ಮಹಾ ಸಭಾಕ್ಕೆ ಸಂದ ಜಯವಾಗಿದೆ ಎಂದರು.

ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ, ಐವಾನ್ ಡಿಸೋಜರವರಿಗೆ ಅಖಿಲ ಭಾರತ ಕ್ರೈಸ್ತ ಮಹಾ ಸಭಾದ ಕೊಡಗು ಜಿಲ್ಲಾ ಘಟಕದ ಪರವಾಗಿ ಅಭಿನಂದನೆಯ ಸಲ್ಲಿಸುವುದಾಗಿ ತಿಳಿಸಿದ್ದಾರೆ.