ಹುಬ್ಬಳ್ಳಿ: ಬೆಂಗಳೂರಿನ ಅಭಿವೃದ್ಧಿಗೆ ಮಹತ್ವ ನೀಡಿದಂತೆ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೆ ಕೂಡ ಮಹತ್ವ ನೀಡಬೇಕು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡುವ ಜತೆಗೆ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಕುರಿತು ಸದನದಲ್ಲಿ ಗುರುವಾರ ಚರ್ಚೆ ವೇಳೆ ಮಾತನಾಡಿದ ಅವರು,
ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸೆ ಕೇಂದ್ರ ಸ್ಥಾಪಿಸಬೇಕೆಂದು ಕಳೆದ ಬೆಳಗಾವಿ ಅಧಿವೇಶನದಲ್ಲಿ ನಾನು ಒತ್ತಾಯಿಸಿದ್ದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹ ಸಹ ಮಾಡಿದ್ದೆ. ಅದಕ್ಕೂ ಸರ್ಕಾರ ಸ್ಪಂದಿಸಿಲ್ಲ. ಮುಖ್ಯಮಂತ್ರಿಯವರು ಬೆಂಗಳೂರು ಅಭಿವೃದ್ಧಿ ಕಡೆ ಹೇಗೆ ಗಮನಹರಿಸುತ್ತಿರೋ ಅದೇ ರೀತಿ ಉಳಿದ ಜಿಲ್ಲೆಗಳಿಗೆ ಪ್ರಾಮುಖ್ಯ ನೀಡಬೇಕೆಂದು ಆಗ್ರಹಿಸಿದರು.
ರೈತರ ಬಗ್ಗೆ ಅಸಡ್ಡೆ
2024-25ರಲ್ಲಿ ಕೃಷಿ ಕ್ಷೇತ್ರಕ್ಕೆ 22,524 ಕೋಟಿ ರೂ. ಮೀಸಲಾಗಿಟ್ಟಿದ್ದರೂ, ಅನ್ನಭಾಗ್ಯದ ಗ್ಯಾರಂಟಿ ಂ ೋಜನೆಯ ವೆಚ ್ಚನ್ನು ಕಳ ೆದರೆ, ಬಿಜೆಪಿ ಸರ್ಕಾರ 2022- 3ರಲ್ಲಿ ಕೃಷಿ ಕ್ಷೇತ್ರಕ್ಕೆ ಮೀಸಲಾಗಿಟ್ಟ 16,214 ಕೋಟಿ ರೂ. ಗಿಂತ ಶೇ. 30ರಷ್ಟು ಕಡಿಮೆ ಹಣವನ್ನು ಪೂರ ೈಸಿರುವುದು ಕಾಂಗ್ರೆಸ್ ಸರ್ಕಾರ ಕೃಷಿ ಕ್ಷೇತ್ರದ ಬಗ್ಗೆ, ರೈತರ ಬಗ್ಗೆ ಇರುವ ಅಸಡ್ಡೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ನೀಡಿದೆ ಬರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಕ್ಕೆ ಕನಿಷ್ಠವೆಂದರೆ 80,000 ಕೋಟಿ ರೂ. ಅಗತ್ಯವಿದೆ ಎಂದು ಹೇಳಿತ್ತು. 2024-25 ಬಜೆಟ್ನಲ್ಲಿ 52,000 ಕೋಟಿ ರೂ. ಗಳನ್ನು ಮಾತ್ರ ಗ್ಯಾರಂಟಿ ಯೋಜನೆಗೆ ಮೀಸಲಿಡುವ ಮೂಲಕ ಶೇ. 40ರಷು ್ಟ ಅರ್ಹ ಕನ್ನಡಿಗರನ್ನು ಗ್ಯಾರಂಟಿ ಂ ೋಜನೆಗಳಿಂದ ಹೊರಗಿಡಲಾಗಿದೆ ಎಂದರು.
ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರ ವ ಾಡಿದ ನಂತರದ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಆರ್ಥಿಕ ಸೂಚ್ಯಂಕದಲಾದ ತೀವ್ರ ಕುಸಿತ ಗಾಬರಿ ಸೃಷ್ಟಿಸುವಂತಹದ್ದು. 2022-23ರಲ್ಲಿ ಶೇ. 2.14ರಷ್ಟಿದ್ದ ವಿತ್ತೀಯ ಕೊರತೆ 2024-25ರ ಅಂತ್ಯದ ವೇಳೆಗೆ ಶೇ. 2.95ರಷ್ಟು ಅಂದರೆ, ಶೇ. 3ರ ಮಿತಿಯನ್ನು ತಲುಪಿದೆ ಎಂದು ಹೇಳಿದರು.