ರಾಯಚೂರು: ಮಹಿಳೆಯರ ಸ್ವಾಭಿಮಾನ ಮತ್ತು ಐಕ್ಯತೆಗಾಗಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಾಲ್ವರು ಮಹಿಳಾ ಸಾಧಕಿಯರ ಪುತ್ಥಳಿಯಲ್ಲಿ ನಗರದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಮಹಿಳಾ ಸ್ವಾಭಿಮಾನಿ ವೃತ್ತ ಹೋರಾಟ ಸಮಿತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮನವಿ ಸಲ್ಲಿಸಿ, ಪ್ರತಿವರ್ಷ ಕೇವಲ ಒಂದು ದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರೆ ಸಾಲದು ಮಹಿಳೆಯರ ಸ್ವಾಭಿಮಾನದ ಪ್ರತೀಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಎರಡು ವರ್ಷಗಳಿಂದ ಮಹಿಳೆಯರ ಸ್ವಾಭಿಮಾನ ಮತ್ತು ಐಕ್ಯತೆ ಸಂಕೇತವಾಗಿ ಒಂದೇ ವೃತ್ತದಲ್ಲಿ ಸಾವಿತ್ರಿಬಾಯಿ ುಲೆ, ಾತೀಮಾ ಶೇಖ್, ಅಕ್ಕಮಹಾದೇವಿ, ಅನಿಬೆಸೆಂಟ್‌ರ ಪುತ್ಥಳಿ ಸ್ಥಾಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ ವಹಿಸಿದೆ.
ಕೂಡಲೇ ಜಿಲ್ಲಾಡಳಿತ ಮಹಿಳಾ ಸಾಧಕಿಯರ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಗೌರವ ನೀಡುವ ಕೆಲಸವನ್ನು ಮಾಡಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಿತಿ ಸಂಚಾಲಕ ವಿದ್ಯಾ ಪಾಟೀಲ್, ಪದಾಕಾರಿಗಳಾದ ಮೋಕ್ಷಮ್ಮ, ವಿರುಪಮ್ಮ, ಮರಿಯಮ್ಮ, ಈರಮ್ಮ, ಕವಿತಾ, ಇಂದ್ರಮ್ಮ, ಶಾಂಭವಿ, ಖಾದರಬೀ, ಅಕ್ಕಮ್ಮ, ಮಲ್ಲಮ್ಮ ಪಾಲ್ಗೊಂಡಿದ್ದರು.