ಜಿಲ್ಲೆ

ಬಾಪೂಜಿ ಕುರಿತ ಪ್ರಬಂಧ ಸ್ಪರ್ಧೆ

ಪ್ರಸಿನ್ ಕೆ.ಆರ್

ಹಾಸನ: ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗಾಂಧೀಜಿ ಅವರ ಬದುಕು, ಸ್ವಾತಂತ್ರೃ ಚಳವಳಿ, ಸರಳತೆ, ಅಹಿಂಸಾ ಮಾರ್ಗ ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 3000 ರೂ., ದ್ವಿತೀಯ ಬಹುಮಾನವಾಗಿ 2000 ರೂ., ತೃತೀಯ ಬಹುಮಾನವಾಗಿ 1000 ರೂ. ನಗದನ್ನು ಇಂದು ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಉದಯಪುರದ ಕೆ.ಪಿ.ಎಸ್. ಶಾಲೆಯ ನಿತ್ಯಾ ಪ್ರಥಮ ಬಹುಮಾನ, ಆಲೂರು ತಾಲೂಕಿನ ಕಣತ್ತೂರಿನ ಕಿರಣ್ ಆಂಗ್ಲ ಮಾಧ್ಯಮ ಶಾಲೆಯ (ಪ್ರೌಢ ಶಾಲಾ ವಿಭಾಗದ) ಗ್ರೀಷ್ಮಾ ದ್ವೀತಿಯ ಬಹುಮಾನ, ಬೇಲೂರು ತಾಲೂಕಿನ ಸರ್ವೋದಯ ಪ್ರೌಢಶಾಲೆಯ ಆದಿತ್ಯ ಗೌಡ ತೃತೀಯ ಬಹುಮಾನ ಪಡೆದುಕೊಂಡರು.

ಪದವಿ ಪೂರ್ವ ವಿಭಾಗದಲ್ಲಿ ಹಾಸನದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುಮಾರಿ ಪ್ರಥಮ ಬಹುಮಾನ, ಹಾಸನದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಹಾಸ್ ದ್ವಿತೀಯ ಬಹುಮಾನ, ಹಾಸನದ ಮಾರ್ಸ್ ಪಿ.ಯು ಕಾಲೇಜಿನ ಲಿಪಿಕಾ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆಯ ಎಚ್.ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮಿತಾ ಪ್ರಥಮ, ಚನ್ನರಾಯಪಟ್ಟಣ ತಾಲೂಕಿನ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಭವ್ಯಶ್ರೀ ದ್ವಿತೀಯ, ಹಾಸನದ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಕೆ.ಆರ್.ಸೌಮ್ಯಾ ಅವರಿಗೆ ತೃತೀಯ ಬಹುಮಾನ ವಿತರಿಸಲಾಯಿತು.