ಕಾರವಾರ: ಇಲ್ಲಿನ ಇಎಸ್‌ಐ ಡಿಸ್ಪೆನ್ಸರಿಯಲ್ಲಿ ಒಪಿಡಿ ಸೇರಿ ಎಲ್ಲ ಸೇವೆಗಳನ್ನು ಒದಗಿಸುವಂತೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಹೊರ ಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಒತ್ತಾಯಿಸಿದ್ದಾರೆ.
ಇಎಸ್‌ಐ ಡಿಸ್ಪೆನ್ಸರಿಯ ವೈದ್ಯರಿಗೆ ಅವರು ಶನಿವಾರ ಮನವಿ ಸಲ್ಲಿಸಿದರು. ಕೈಗಾ, ಸೀಬರ್ಡ್ ನೌಕಾನೆಲೆ ಸೇರಿ ದೊಡ್ಡ ಉದ್ಯಮಗಳು ಸಾವಿರಾರು ಕಾರ್ಮಿಕರು ಇದ್ದರೂ. ಕಾರವಾರದಲ್ಲಿ ಪೂರ್ಣ ಪ್ರಮಾಣದ ಇಎಸ್‌ಐ ಆಸ್ಪತ್ರೆ ಇಲ್ಲ. ಇಲ್ಲಿ ಕೆಲ ವರ್ಷಗಳ ಹಿಂದೆ ಡಿಸ್ಪೆನ್ಸರಿ ಪ್ರಾರಂಭಿಸಲಾಗಿದೆ. ಈ ಹಿಂದೆ ಕಾರ್ಮಿಕರ ಬೇಡಿಕೆಯ ಮೇರೆಗೆ ಇಎಸ್‌ಐ ಡಿಸ್ಪೆನ್ಸರಿಯಲ್ಲೇ ಒಪಿಡಿ ಸೇವೆ, ಖಾಸಗಿ ಆಸ್ಪತ್ರೆಗೆ ಶಿಫಾರಸು ಮುಂತಾದ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಈಗ ಮೂರ್ನಾಲ್ಕು ತಿಂಗಳಿAದ ಆ ಸೇವೆಯನ್ನು ಸ್ಥಗಿತ ಮಾಡಲಾಗಿದ್ದು, ಇಎಸ್‌ಐ ದಾಂಡೇಲಿಗೆ ಹೋಗಬೇಕಾಗಿದೆ. ಇದರಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಸಮಸ್ಯೆ ಹೇಳಿಕೊಂಡರು. ಸದ್ಯ ಇಲ್ಲಿ ಮಧ್ಯಾಹ್ನ 4 ಗಂಟೆಗೆಲ್ಲ ಒಪಿಡಿ ಸೇವೆ ಸ್ಥಗಿತ ಮಾಡಲಾಗುತ್ತಿದೆ. ಕೆಲೆ ಮುಗಿಸಿ, ಆಸ್ಪತ್ರೆಗೆ ಬರುಲು ಸಾಧ್ಯವಾಗದು. ಇದಕ್ಕಾಗಿಯೇ ಒಂದು ದಿನ ರಜೆ ಹಾಕಬೇಕಿದೆ. ದಾಂಡೇಲಿ ಆಸ್ಪತ್ರೆಯಂತೆ ಕಾರವಾರ ಆಸ್ಪತ್ರೆಯಲ್ಲೂ ಒಪಿಡಿ ಸೇವೆಯನ್ನು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ನೇತೃತ್ವದಲ್ಲಿ ದೀಪಕ್ ನಾಯ್ಕ, ಗೌರವ ತಳಪಣಕರ್, ಕಿರಣ ಕೊಠಾರಕರ್, ಕಮಲಾಕರ ನಾಯ್ಕ, ಪ್ರಶಾಂತ ನಾಯ್ಕ ಇತರರು ಮನವಿ ಸಲ್ಲಿಕೆ ಸಂದರ್ಭದಲ್ಲಿದ್ದರು.