ಮುಂಡರಗಿ : ದೈವಿ ಗುಣಗಳ ಧಾರಣೆಯಿಂದಲೇ ಶಿವಬಾಬಾರ ಆಶೀರ್ವಾದದ ಶ್ರೀರಕ್ಷೆ ನಮಗೆ ದೊರೆಯುತ್ತದೆ ಎಂದು ಹುಬ್ಬಳ್ಳಿಯ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ವಲಯ ಸಂಚಾಲಕಿ ಬಿ.ಕೆ. ನಿರ್ಮಲ ಅಕ್ಕನವರು ಹೇಳಿದರು.
ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವ ಪರಿವರ್ತನೆಯಿಂದಲೇ ವಿಶ್ವ ಪರಿವರ್ತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾವು ಜೀವನದಲ್ಲಿ ಸದಾ ಶಾಂತಿ, ಸಂತೋಷವನ್ನು ಪಡೆಯಬೇಕಾದರೆ ನಾವು ಸದಾ ಶಿವಬಾಬಾರವರ ನೆನಪಿನ ರಾಜಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಕೆ. ಜಯಲಕ್ಷ್ಮಿ ಅಕ್ಕನವರು ಮಾತನಾಡಿ, ನಾವು ಸ್ವಲ್ಪ ಪರಿವರ್ತನೆಯನ್ನು ಮಾಡಿಕೊಳ್ಳುವುದರ ಮೂಲಕ ವಿಶ್ವಪರಿವರ್ತನೆಯನ್ನು ಮಾಡುವುದಲ್ಲದೆ ಎಲ್ಲರಿಗೂ ಶಾಂತಿ ಹಾಗೂ ಆನಂದಮಯ ಜೀವನ ನಡೆಸಲು ಕಾರಣರಾಗುತ್ತೇವೆ. ನಮ್ಮಲ್ಲಿ ಸ್ವ ಪರಿವರ್ತನೆ ಅಳವಡಿಸಿಕೊಳ್ಳಲು ಈಶ್ವರೀಯ ರಾಜಯೋಗವನ್ನು ಎಲ್ಲರಿಗೂ ತಿಳಿಸಿಕೊಡಬೇಕು. ಪ್ರತಿನಿತ್ಯ ಒಂದು ಗಂಟೆಯಾದರೂ ಶಿವಬಾಬಾರ ಸ್ಮöÈತಿಯೊಂದಿಗೆ ನಾವು ಸದಾ ಇರಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಬಿ.ಕೆ. ಮಂಗಳ ಅಕ್ಕನವರು. ಬಿ.ಕೆ. ಉಮಾ ಅಕ್ಕನವರು, ಬಿ.ಕೆ. ರಾಜೇಶ್ವರಿ ಅಕ್ಕನವರು ಉಪಸ್ಥಿತರಿದ್ದರು. ಕುಮಾರಿ ನಯನ ಅಳವಂಡಿ ಪ್ರಾರ್ಥಿಸಿದರು. ಬಿ.ಕೆ .ವಿಜಯಕುಮಾರ ಬಣಕಾರ ಅವರು ಸ್ವಾಗತಿಸಿದರು. ಶಂಕರ ಕುಕನೂರ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಶ್ರೀರಕ್ಷೆಯನ್ನು ಕಟ್ಟುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ನಯನ ಅಳವಂಡಿ ಬರದೂರಿನ ಶರಣಪ್ಪ ಕುರಿ ಅವರಿಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಜೀವ ರೆಡ್ಡಿ, ಶಿವನಗೌಡ ಮಾಲಿಪಾಟೀಲ, ಸುರೇಶ ಬೆಟಗೇರಿ,ಈರಣ್ಣ ಬಣಕಾರ, ಕಾಮಣ್ಣನವರ, ರಾಘಣ್ಣ ಕೊಂಬಳಿ, ವೀರನಗೌಡ ಪಾಟೀಲ, ಈಶಣ್ಣ ಬರದೂರ, ಬಸಮ್ಮ ಪಾಟೀಲ, ಕಿರಣ ಪಾಟೀಲ, ರೇಖಾ Pಕೊಂಬಳಿ, ದ್ರಾಕ್ಷಾಯಿಣಿ ಬಣಕಾರ, ಸೌಮ್ಯ, ಶಕುಂತಲಾ, ಕಾಳಮ್ಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು