ಜಿಲ್ಲೆ

ಬಿಜೆಪಿ ಮಹಾನಗರ ರೈತ ಮೋರ್ಚಾಗೆ ಈಶ್ವರಗೌಡ ಅಧ್ಯಕ್ಷ

ಹುಬ್ಬಳ್ಳಿ : ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಈಶ್ವರಗೌಡ ಪಾಟೀಲ ಹಾಗೂ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರೀತಂ ಅರಿಕೇರಿ ನೇಮಕಗೊಂಡಿದ್ದಾರೆ.

ಮಹಾನಗರ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಬಸವರಾಜ ಜಾಬಿನ್, ಮಂಜುನಾಥ ನೀರಲಕಟ್ಟಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಹೊರಕೇರಿ, ಶಕ್ತಿ ಹಿರೇಮಠ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೀಮಾ ಲದ್ವಾ, ಪ್ರಧಾನ ಕಾರ್ಯದರ್ಶಿಗಳಾಗಿ ಮಾಲತಿ ಹುಲಕಟ್ಟಿ, ಪೂಜಾ ರಾಯ್ಕರ, ಎಸ್​ಸಿ ಮೋರ್ಚಾ ಅಧ್ಯಕ್ಷರಾಗಿ ಹನುಮಂತ ಹರಿವಾಣ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಬಿಜವಾಡ, ಸುಭಾಷ ಅಂಕಲಕೋಟಿ, ಎಸ್​ಟಿ ಮೋರ್ಚಾ ಅಧ್ಯಕ್ಷರಾಗಿ ಅಶೋಕ ವಾಲ್ಮೀಕಿ, ಪ್ರಧಾನ ಕಾರ್ಯದರ್ಶಿಗಳಾಗಿ ಹನುಮಂತ ಗೌಡರ, ಮಾರುತಿ ಚಾಕಲಬ್ಬಿ, ಹಿಂದುಳಿದ ವರ್ಗ (ಒಬಿಸಿ) ಮೋರ್ಚಾ ಅಧ್ಯಕ್ಷರಾಗಿ ಪ್ರವೀಣ (ಗದಗೆಪ್ಪ) ಹುರಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಡಾ. ರವೀಂದ್ರ ಯಲ್ಕಾನ, ಶ್ರೀನಿವಾಸ ಕೋಟ್ಯಾನ ಅವರನ್ನು ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ನೇಮಕಗೊಳಿಸಿದ್ದಾರೆ.