ಜಿಲ್ಲೆ

ಎರ್ಮೆತೊಟ್ಟಿ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ, ಆಟಿಡೊಂಜಿ ದಿನ ಕಾರ್ಯಕ್ರಮ

Mangaluru - Nishantha Narayana

ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿಯೋಜನೆ ವಿಟ್ಲ ಹಾಗೂ ಎರ್ಮೆತೊಟ್ಟಿ ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಘೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸ್ತನ್ಯಪಾನ ಸಪ್ತಾಹ, ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಬಿ.ಎಸ್. ಪುಷ್ಪಾವತಿ ನಡೆಸಿದರು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನಿತಾ ವಹಿಸಿದ್ದರು. ಮಹಿಳೆಯರ ಆರೋಗ್ಯ, ಎದೆಹಾಲಿನ ಮಹತ್ವ, ಸಾಂಕ್ರಾಮಿಕ ರೋಗಗಳ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ತಿಳಿಸಲಾಯಿತು.

ಆಟಿಡೊಂಜಿ ದಿನದ ಅಂಗವಾಗಿ ಉಪ್ಪುಸೊಳೆ ಪಲ್ಯ, ಚಕ್ಕುಲಿ, ಉಂಡ್ಲುಕಾಯಿ, ಒಂದೆಲಗ ಚಟ್ನಿ, ಹೀರೆಕಾಯಿ ಪಲ್ಯ, ಅಂಬಟೆ ಮಾವಿನ ಕಾಯಿ ಚಟ್ನಿ, ಅರಸಿನ ಎಲೆ ತಿಂಡಿ, ಮೊಳಕೆ ಬರಿಸಿದ ಹುರುಳಿ ಹೆಸ್ರು ಆಟಿ ವಿಶೇಷ ತಿಂಡಿ, ಕೆಸುವಿನ ಎಲೆ ನುಗ್ಗೆ ಸೊಪ್ಪಿನ ಪತ್ರೊಡೆ, ಹಲಸಿನ ಹಣ್ಣಿನ ಪಾಯಸ, ಹಲಸಿನ ಬೀಜದ ಉಂಡೆ ಸೇರಿದಿ ವಿವಿಧ ಖಾದ್ಯಗಳನ್ನು ತಯಾರಿಸಿ ತರಲಾಗಿತ್ತು.

ವಿಟ್ಲ ಶಿಶು ಅಭಿವೃದ್ಧಿ ಯೋಜನೆ ಅಡ್ಯನಡ್ಕ ವಲಯ ಮೇಲ್ವಿಚಾರಕಿ ಸೋಮಕ್ಕ, ಆಶಾ ಕಾರ್ಯಕರ್ತೆ ಬೇಬಿ, ಅಂಗನವಾಡಿ ಕೇಂದ್ರ ಕಾರ್ಯದರ್ಶಿ ಅಶ್ವಿನಿ, ಸಹಾಯಕಿ ಪುಷ್ಪ ಉಪಸ್ಥಿತರಿದ್ದರು.