ಅಳವಂಡಿಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಪಿಎಸ್‌ಐ ನಾಗಪ್ಪ ಮಾತನಾಡಿದರು. ಪ್ರಮುಖರಾದ ಮಲ್ಲೇಶ, ಬಿ.ಎನ್. ಹೊರಪೇಟಿ, ಫಕ್ಕೀರಶ, ರಫೀಕ್ ಬಳಿಗಾರ, ಪರಸಪ್ಪ, ಮರಿಯಪ್ಪ, ರಮೇಶ, ವಸಂತ, ನಾಗರಾಜ ಇದ್ದರು.  
ಜಿಲ್ಲೆ

ಸುರಕ್ಷಿತ ಪ್ರಯಾಣಕ್ಕಾಗಿ ಸಂಚಾರ ನಿಯಮ ಪಾಲಿಸಿ

ಅಳವಂಡಿ: ಸುರಕ್ಷಿತ ಪ್ರಯಾಣಕ್ಕಾಗಿ ಹೆಲ್ಮೆಟ್ ಧರಿಸುವ ಜತೆಗೆ ವಾಹನದ ದಾಖಲೆಗಳನ್ನು ಅವಶ್ಯಕವಾಗಿ ಕೊಂಡೊಯ್ಯಬೇಕು ಎಂದು ಪಿಎಸ್‌ಐ ನಾಗಪ್ಪ ತಿಳಿಸಿದರು.

ಗ್ರಾಮದಲ್ಲಿ ಯುವಧ್ವನಿ ಶಿಕ್ಷಣ ಹಾಗೂ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಮೋರನಹಳ್ಳಿ, ಮಹಿಳಾ ಧ್ವನಿ ಸಂಸ್ಥೆ ಕೊಪ್ಪಳ, ಶ್ರೀ ಸಿದ್ಧಿ ವಿನಾಯಕ ಯುವಕ ಸಂಘ ಮೋರನಹಳ್ಳಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಉದ್ದೇಶಿಸ ಬುಧವಾರ ಮಾತನಾಡಿದರು.

ಸಂಚಾರಿ ಪೊಲೀಸ್ ಜಗದೀಶಯ್ಯ ಮಾತನಾಡಿ, ವಾಹನ ಚಲಾಯಿಸಲು ಲೈಸೆನ್ಸ ಅಗತ್ಯವಾಗಿರುತ್ತದೆ. ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದರು.

ಇದೇ ವೇಳೆ ಸ್ವಯಂ ಸೇವಕರ ತಂಡದಿಂದ ರಸ್ತೆ ಸುರಕ್ಷಾ ಸಪ್ತಾಹ ನಡೆಸಿ ವಾಹನ ಸವಾರರಿಗೆ ತಿಳಿವಳಿಕೆ ನೀಡಲಾಯಿತು. ಭಾಗವಹಿಸಿದ ಮಕ್ಕಳು ಹಾಗೂ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಲಾಯಿತು.

ಪ್ರಮುಖರಾದ ರಫೀಕ್ ಬಳಿಗಾರ, ಮಲ್ಲೇಶ, ಬಿ.ಎನ್. ಹೊರಪೇಟಿ, ಫಕ್ಕೀರೇಶ, ಪರಸಪ್ಪ, ಮರಿಯಪ್ಪ, ವಸಂತ, ನಾಗರಾಜ ಹಾಗೂ ರಮೇಶ ಇದ್ದರು.