ಗದಗ:
ನಗರದ ರೆಡ್ಕ್ರಾಸ್ ಭವನದಲ್ಲಿ ಶನಿವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಕಲಚೇತನರಿಗೆ ಕೃತಕ ಕಾಲು ಹಾಗೂ ಸ್ಯಾಂಡಲ್ಸ್ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಲಕ್ಕುಂಡಿ ಗ್ರಾಮದ ಲಾನುಭವಿ ಕಲ್ಲಯ್ಯ ಮಹಾದೇವಯ್ಯ ಶಂಕಿನಮಠ, ಗಜೇಂದ್ರಗಡ ನಗರದ ಕಾಮಾ ಕಂಚಗಾರ ಅವರಿಗೆ ಕೃತಕ ಕಾಲು, ಬಸಮ್ಮ ಬಸವಣ್ಣೆಪ್ಪ ಕುಂಟೋಜಿ ಅವರಿಗೆ ಸ್ಯಾಂಡಲ್ಸ್ ವಿತರಿಸಲಾಯಿತು. ಆರ್ ಎನ್ ಗೋಡಬೋಲೆ, ಎಂ. ಡಿ ಸಮುದ್ರಿ, ಗುಂಜನ ಗಾಲಾ, ಚಾಂದಸಾಬ ಅಬ್ಬಿಗೇರಿ ಹಲವರು ಇದ್ದರು.