RAICHUR 
ಜಿಲ್ಲೆ

ಮೀನುಗಾರ ಕುಟುಂಬಕ್ಕೆ ಸಲಕರಣೆ ವಿತರಣೆ

 ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಗ್ರಾಮೀಣ ಕ್ಷೇತ್ರದ ೨೮ ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆ ಸಲಕರಣೆ ಕಿಟಗಳು ಮತ್ತು ಲೈ-Àï ಜÁಕೆಟï ಗಳನ್ನು ವಿತರಿಸುವುದರ ಜತೆಗೆ ಮತ್ಸಾಶ್ರಯ ಯೋಜನೆಯಡಿ ೨೫ -Àಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿದ ಕಾರ್ಯಾದೇಶ ಪತ್ರವನ್ನು ವಿತರಿಸಿದರು.

ನಂತರ ಮಾತನಾಡಿ, ಕ್ಷೇತ್ರದ ಬಡ ರೈತರು ಹಾಗೂ ಮೀನುಗಾರಿಕೆ ಕುಟುಂಬದವರು ಸರ್ಕಾರದಿಂದ ವಿವಿಧ ಯೋಜನೆಯಡಿ ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ಅದನ್ನು ಸದುಪಯೋಗ ಪಡೆದುಕೊಳ್ಳಲು ಮತ್ತು ಮೀನುಗಾರಿಕೆ ಸಮಯದಲ್ಲಿ ಲೈ-Àï ಜÁಕೆಟï ಧರಿಸಿ ಜÁಗುರುಕರಾಗಿ ಕೆಲಸ ನಿರ್ವಹಿಸಲು -Àಲಾನುಭವಿಗಳಿಗೆ ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ -Àಲಾನುಭವಿಗಳಿಗೆ ನೀರಾವರಿ ಸೌಲಭ್ಯವನ್ನು ಪಡೆದುಕೊಂಡು ಉತ್ತಮವಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಸೂಚಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ತಲಮಾರಿ, ಮುಖಂಡರಾದ ನಾಗೇಂದ್ರಪ್ಪ ಮಟಮಾರಿ, ಮಲ್ಲಿಕಾರ್ಜುನ ವಕೀಲರು, ಶ್ರೀನಿವಾಸರೆಡ್ಡಿ ಬೂರ್ದಿಪಾಡ, ಸೈಯದï ಸಾಬï ಮನ್ಸಲಾಪೂರ, ರಾಜಶೇಖರ ರಂಗಾ, ಪಂಪಾಪತಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಸನಗೌಡ, ವಾಲ್ಮೀಕಿ ನಿಗಮದ ಜಿ¯್ಲÁ ವ್ಯವಸ್ಥಾಪಕ ಪ್ರಕಾಶ ಸೇರಿ ಅನೇಕರು ಇದ್ದರು.