ಗಂಗಾವತಿ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ಹಡಪದ ಅಪ್ಪಣ್ಣ ಸಮಾಜ ಸಮಿತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಅವರ 890ನೇ ಜಯಂತ್ಯುತ್ಸವ ಆಚರಿಸಲಾಯಿತು. ಶಿರಸ್ತೇದಾರ ರವಿಕುಮಾರ ನಾಯಕ್ವಾಡಿ, ವಿಷಯ ನಿರ್ವಾಹಕ ಶ್ರೀರಾಮ, ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ಹನುಮಂತಪ್ಪ ಸರಿಗಮ, ಕಾರ್ಯದರ್ಶಿ ಶಿವಣ್ಣ ನೀಲಕಮಲ, ಶರಣಪ್ಪ ಇತರರಿದ್ದರು. 
ಜಿಲ್ಲೆ

ಸಮಸಮಾಜ ನಿರ್ಮಾಣಕ್ಕೆ ಯತ್ನ

Kopala - Desk - Eraveni

ಗಂಗಾವತಿ: ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ತಾಲೂಕಾಡಳಿತ ಮತ್ತು ಹಡಪದ ಅಪ್ಪಣ್ಣ ಸಮಾಜ ಸಮಿತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಅವರ 890ನೇ ಜಯಂತ್ಯುತ್ಸವ ಭಾನುವಾರ ಆಚರಿಸಲಾಯಿತು.

ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಶಿರಸ್ತೇದಾರ ರವಿಕುಮಾರ ನಾಯಕ್ವಾಡಿ ಮಾತನಾಡಿ, 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ವಚನಗಳನ್ನು ರಚಿಸುವ ಮೂಲಕ ಸಮಸಮಾಜ ನಿರ್ಮಿಸಲು ಶ್ರಮಿಸಿದ ಅಗ್ರಗಣ್ಯರು ಎಂದರು.

ವಿಷಯ ನಿರ್ವಾಹಕ ಶ್ರೀರಾಮ, ತಾಲೂಕು ಅಧ್ಯಕ್ಷ ಹನುಮಂತಪ್ಪ ಸರಿಗಮ,ಕಾರ್ಯದರ್ಶಿ ಶಿವಣ್ಣ ನೀಲಕಮಲ, ಶರಣಪ್ಪ ಇತರರಿದ್ದರು.