ಕೂಡ್ಲಿಗಿ ಗುಡೇಕೋಟೆ ಮತ್ತು ಚಂದ್ರಶೇಖರಪುರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ ಮಂಗಳವಾರ ಆಚರಣೆ ಮಾಡಿದರು. ಗುಡೇಕೋಟೆ ಮತ್ತು ಚಂದ್ರಶೇಖರಪುರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಎ.ಕೆ.ಪ್ರಕಾಶ್, ವಸತಿ ನಿಲಯದ ಅಡುಗೆ ಸಹಾಯಕರಾದ ರಂಗಪ್ಪ, ಚೌಡೇಶ್ವರಿ, ಗಣೇಶ್, ಮಹೇಶ್, ಸಾಕಮ್ಮ ಇದ್ದರು. 
ಜಿಲ್ಲೆ

ಸಮಸಮಾಜ ನಿರ್ಮಾಣಕ್ಕೆ ಬದ್ಧರಾಗಿ

Kopala - Desk - Eraveni

ಕೂಡ್ಲಿಗಿ: ಕಲ್ಯಾಣ ಅಭಿವೃದ್ಧಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜದ ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗೆ ಡಿ.ದೇವರಾಜ ಅರಸು ಶ್ರಮಿಸಿದ್ದಾರೆ ಎಂದು ಗುಡೇಕೋಟೆ ಮತ್ತು ಚಂದ್ರಶೇಖರಪುರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮೇಲ್ವಿಚಾರಕ ಎ.ಕೆ.ಪ್ರಕಾಶ್ ಹೇಳಿದರು.

ತಾಲೂಕಿನ ಗುಡೇಕೋಟೆ ಮತ್ತು ಚಂದ್ರಶೇಖರಪುರ ಗ್ರಾಮಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆದ ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆಯಲ್ಲಿ ಮಂಗಳವಾರ ಮಾತನಾಡಿದರು.

ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ನಿವಾರಣೆಗೆ ಸೂಕ್ತ ಕಾನೂನು ರಚಿಸಿ, ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಟ್ವರು. ಕನಿಷ್ಠ ವೇತನ ಪದ್ಧತಿ, ಹಿಂದುಳಿದ ವರ್ಗದವರಿಗೆ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ಸಮಾಜ ಮುಂದೆ ತರಲು ಶ್ರಮಿಸಿದರು. ಇದರಿಂದಾಗಿ ಸಮಾಜದಲ್ಲಿ ಕಟ್ಟಕಡೆ ವ್ಯಕ್ತಿಗಳು ಸಹ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು.

ರಾಜ್ಯದಲ್ಲಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಬಾರದು ಎಂದು ರಾಜ್ಯದಾದ್ಯಂತ ವಿದ್ಯಾರ್ಥಿ ನಿಲಯಗಳನ್ನು ನೂತನವಾಗಿ ವಸತಿ ನಿಲಯಗಳನ್ನಾಗಿ ತೆರೆಯುವುದರೊಂದಿಗೆ ಎಲ್ಲರೂ ಶಿಕ್ಷಣವಂತರಾಗಬೇಕೆಂದು ಅಭಿಲಾಷೆ ಹೊಂದಿದ್ದರು.

ಹಾಗಾಗಿ ವಿದ್ಯಾರ್ಥಿಗಳು ಡಿ.ದೇವರಾಜು ಅರಸು ನೀಡಿರುವ ಹಲವಾರು ಆದರ್ಶಗಳನ್ನು ವಿದ್ಯಾರ್ಥಿಗಳೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಿಸಬೇಕು ಎಂದರು. ಅಡುಗೆ ಸಹಾಯಕರಾದ ರಂಗಪ್ಪ, ಚೌಡೇಶ್ವರಿ, ಗಣೇಶ್, ಮಹೇಶ್, ಸಾಕಮ್ಮ, ಗುಡೇಕೋಟೆಯ ನಯನ, ನಾಗಮ್ಮ, ಮಾರಕ್ಕ, ಇತರರಿದ್ದರು.