ಸಿರಿಗೇರಿ ನವಗ್ರಾಮದ ಚರ್ಚ್‌ನಲ್ಲಿ ಆಯೋಜಿಸಿದ್ದ ಪರಿಶುದ್ಧಾತ್ಮನ ಬೆಂಕಿ ಅಭಿಷೇಕ ಕೂಟ ಕಾರ್ಯಕ್ರಮದಲ್ಲಿ ಪಾಸ್ಟರ್ ಜೋಸೆಫ್ ರಾಜು ಮಾತನಾಡಿದರು. ಪಾಸ್ಟರ್‌ಗಳಾದ ನೀಲಪ್ಪ,ರೇಣುಕಮ್ಮ, ಗೀರೀಶ್ ನಾಯ್ಕ, ರಾರಾವಿ ವೆಂಕಟೇಶ್ ಇತರರಿದ್ದರು. 
ಜಿಲ್ಲೆ

ಸಮ ಸಮಾಜ ನಿರ್ಮಿಸಲು ಕೈಜೋಡಿಸಿ

Gangavati - Desk - Veeresh S Ullagaddi

ಸಿರಿಗೇರಿ: ಜಾತಿ, ಧರ್ಮ ಎಣಿಸದೆ ಎಲ್ಲರೂ ಒಂದೇ ಎಂಬ ಮನೋಭಾವದಿಂದ ಜೀವನ ನಡೆಸಬೇಕು ಎಂದು ಬೆಂಗಳೂರಿನ ಪಾಸ್ಟರ್ ಜೋಸೆಫ್ ರಾಜು ಹೇಳಿದರು.


ಇಲ್ಲಿನ ನವಗ್ರಾಮ ಯೇಸುಕ್ರಿಸ್ತ ಭವನದ ಆವರಣದಲ್ಲಿ ಆಯೋಜಿಸಿದ್ದ ಪರಿಶುದ್ಧಾತ್ಮನ ಬೆಂಕಿ ಅಭಿಷೇಕ ಕೂಟ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಧರ್ಮಗಳ ನಡುವೆ ನಡೆಯುತ್ತಿರುವ ಕಲಹಗಳಿಂದ ದೂರವಿದ್ದು, ಭಾವೈಕ್ಯ, ಪರಸ್ಪರ ನಂಬಿಕೆಯಿಂದ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.


ಪಾಸ್ಟರ್ ನೀಲಪ್ಪ ಮಾತನಾಡಿ, ರಾಜ್ಯಾದ್ಯಂತ ಮಳೆ ಇಲ್ಲದೆ ಬರಗಾಲವಿದ್ದು ತರಕಾರಿ, ಧಾನ್ಯಗಳ ಬೆಲೆ ಗನನಕ್ಕೆ ಏರಿದೆ. ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆ ಬರಲೆಂದು ಮೂರು ದಿನ ಉಪವಾಸ ಮಾಡಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.


ಪಾಸ್ಟರ್‌ಗಳಾದ ಗಿರೀಶ್ ನಾಯ್ಕ, ರೇಣುಕಮ್ಮ, ಹೊಳಗುಂದಿ ದ್ಯಾವಣ್ಣ,ಎನ್.ಕುಮಾರ್, ಲಕ್ಷ್ಮಣ್ ಭಂಡಾರಿ, ಮಾರೆಪ್ಪ, ಮಹೇಶ್, ಮಲ್ಲೇಶ್, ಮುದಿಯಪ್ಪ, ಜೆಡೆಪ್ಪ, ಸೋಮಪ್ಪ, ರಮೇಶ ,ಬಸಣ್ಣ, ಈರಣ್ಣ, ಭರತ್ ಇದ್ದರು.