ಬ್ಯಾಡಗಿ: 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಜತೆಗೆ ಸಮಾಜದ ಬೇರೂರಿದ್ದ ಮೌಢ್ಯ ಆಚರಣೆಗಳನ್ನು ತೊಡೆದು ಹಾಕಲು ವಚನಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ ಎಂದು ಅರಣ್ಯ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಹಾಗೂ ಮಹರ್ಷಿ ವೇದವ್ಯಾಸರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಗುರು ಬಸವೇಶ್ವರರು ಅನುಭವ ಮಂಟಪದಲ್ಲಿ ಧರ್ಮ, ಜಾತಿ ಲೆಕ್ಕಿಸದೆ ಎಲ್ಲರಿಗೂ ಅವಕಾಶ ಕಲ್ಪಿಸಿದ್ದರು. ಜಾತಿ ವ್ಯವಸ್ಥೆ ಹಾಗೂ ಕಂದಾಚಾರ ಕಿತ್ತೊಗೆಯುವ ಸಂಕಲ್ಪ ಮಾಡಿದ್ದರು. ಶರಣ ಅಂಬಿಗರ ಚೌಡಯ್ಯ, ಶರಣೆ ಅಕ್ಕಮಹಾದೇವಿ, ಮಾದರ ಹರಳಯ್ಯ, ಮಡಿವಾಳ ಮಾಚಯ್ಯನಂತಹ ಶರಣರು ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಬುದ್ದ, ಬಸವ, ಅಂಬೇಡ್ಕರರಂತಹ ಸಮಾಜ ಸುಧಾರಕರ ಹೋರಾಟದ ಫಲದಿಂದ ಎಲ್ಲರಿಗೂ ನ್ಯಾಯ ಸಿಕ್ಕಿದೆ ಎಂದರು.
ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಸಮಾಜ ಬಾಂಧವರು ತಮ್ಮ ಹಕ್ಕುಗಳನ್ನ ಪಡೆಯಲು ಮೊದಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಮಾಜ ಬಾಂಧವರ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದೇವೆ. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ರ್ಚಚಿಸಿ ಸಮಾಜ ಬಾಂಧವರಿಗೆ ನ್ಯಾಯ ಒದಗಿಸಬೇಕು ಎಂದರು.
ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಮಾಜಿ ಸಚಿವ ಪ್ರಮೋದ ಮಧ್ವರಾಜ್, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ವಕೀಲರ ಸಂಘದ ತಾಲೂಕಾಧ್ಯಕ್ಷ ಶಂಕರ ರ್ಬಾ, ಗ್ರಾಪಂ ಅಧ್ಯಕ್ಷೆ ರೇಣುಕಾ ತಗಡಿನಮನಿ, ನೀಲಗಿರಿಯಪ್ಪ ಕಾಕೋಳ, ಸದಾನಂದಯ್ಯ ಹಿರೇಮಠ, ಮಂಜುನಾಥ ಬೋವಿ, ನಿಂಗಪ್ಪ ಹೆಗ್ಗಣದ, ನಾಗರಾಜ ಆನ್ವೇರಿ, ಸುರೇಶ ಹುಳಬುತ್ತಿ, ದಾನಪ್ಪ ಚೂರಿ, ಸುರೇಶ ಹುಳಬುತ್ತಿ, ಗುಡ್ಡಪ್ಪ ರ್ಬಾ, ಹೊನ್ನಪ್ಪ ಸಣ್ಣರ್ಬಾ, ಚಂದ್ರು ಮುಳಗುಂದ, ಚಂದ್ರಪ್ಪ ದೊಡ್ಡಮನಿ, ಪರಮೇಶ ಮುಳಗುಂದ, ಮಂಜುನಾಥ ಹಾದಿಮನಿ ಇತರರಿದ್ದರು.