ಬೈಲಹೊಂಗಲ: ಜಗಜ್ಯೋತಿ ಬಸವಣ್ಣನ ವಚನಗಳ ಆಶಯದಂತೆ ಡಾ.ಶಿವಾನಂದ ಭಾರತಿ ಶ್ರೀಗಳು ನಡೆದು ನಾಡನ್ನು ಉದ್ಧಾರ ಮಾಡುತ್ತಿದ್ದಾರೆ ಎಂದು ಕನ್ಹೇರಿ ಸಿದ್ದಗಿರಿ ಮಠದ ಅದಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಇಂಚಲ ಗ್ರಾಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ 85ನೇ ವರ್ಷದ ವರ್ಧಂತಿ ಮಹೋತ್ಸವ, 55ನೇ ವರ್ಷದ ಪೀಠಾರೋಹಣ ಹಾಗೂ ಅಖಿಲ ಭಾರತ ವೇದಾಂತ ಪರಿಷತ್ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಅಂಬಾ ಪರಮೇಶ್ವರಿ ಅಮತ ಶಿಲಾಮಂದಿರದ ಮಹಾದ್ವಾರ, ಕಷಿಮೇಳ ಉದ್ಘಾಟಿಸಿ ಮಾತನಾಡಿದರು. ನಾಡಿನ ಶಾಂತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳ ಸೇವೆ ಶ್ಲಾನೀಯ. ಅವರನ್ನು ಪಡೆದ ನಾವೇ ಧನ್ಯರು. ಡಾ.ಶಿವಾನಂದ ಭಾರತಿ ಶ್ರೀಗಳು ಬಸವಣ್ಣನವರಂತೆ ಸಮಾನತೆಯ ಸಂತ. ಭಕ್ತರನ್ನು ಮಕ್ಕಳಂತೆ ಕಾಣುವ ಕರುಣಾಮಯಿ ಎಂದರು.
ಕುಗ್ರಾಮವಾಗಿದ್ದ ಇಂಚಲವನ್ನು ಇಂದು ಈ ಮಟ್ಟಕ್ಕೆ ಬೆಳೆಸಿದ್ದಾರೆ. ವೆದ್ಯಕಿಯ ಮಹಾವಿದ್ಯಾಲಯದಂಥ ಕಾಲೇಜು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದು, ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ. ನಾಡಿನ ಕೆಲವೇ ಮಹಾತ್ಮರಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳೂ ಒಬ್ಬರು ಎಂದು ಶ್ಲಾಸಿದರು. ರೈತರು ವೆಜ್ಞಾನಿಕ ಕಷಿ ತಂತ್ರಜ್ಞಾನ ಅನುಸರಿಸಬೇಕು. ಮಾಹಿತಿ ಕೊರತೆಯಿಂದಾಗಿ ಪ್ರತಿ ಬಾರಿ ರೆತರು ನಷ್ಟ ಅನುಭವಿಸುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞಾನಗಳ ಮಾಹಿತಿ ನೀಡಲು ಬೃಹತ್ ಕಷಿಮೇಳ ಆಯೋಜಿಸಲಾಗಿದ್ದು ರೈತರು ಸದುಪಯೋಗ ಪಡೆಯಬೇಕು. ಸಾವಯವ ಕಷಿ ಪದ್ಧತಿ ಅಳವಡಿಸಿಕೊಂಡು ರೈತರು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಹೆದರಾಬಾದ ಆಚಾರ್ಯ ಪರಿಶುದ್ಧಾನಂದ ಗಿರಿ ಸ್ವಾಮೀಜಿ, ಆಂಧ್ರಪ್ರದೇಶದ ಉರವನಕೊಂಡ ಕರಿಬಸವಾನಂದ ಸ್ವಾಮೀಜಿ ಮಾತನಾಡಿ, ಡಾ.ಭಾರತಿ ಶ್ರೀಗಳು ಪರಿಶ್ರಮದ ಲವಾಗಿ ಇಲ್ಲಿ ಶಿಣ, ಆರೋಗ್ಯ, ಧಾರ್ಮಿಕ ಕ್ರಾಂತಿಯಾಗುತ್ತಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ತಲ್ಲೀನರಾದರೆ ಜನ್ಮಸಾರ್ಥಕ ಎಂದರು. ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸುೇತ್ರ ಇಂಚಲ ಪೂಜ್ಯರ ತಪೋ@ಶಕ್ತಿ ಅಪಾರ. ಅವರ ವರ್ಧಂತಿ ಮಹೋತ್ಸವದಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದರು.
ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಮಾತನಾಡಿದರು. ಹಂದಿಗುಂದ ಅಡಿಶಿವಾನಂದ ಸ್ವಾಮೀಜಿ, ಮಂಟೂರ ಸದಾನಂದ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಬೊಮ್ಮಕಪಲ್ಲಿ ಮಾತೋಶ್ರೀ ಪರಾವಿ ವಿದ್ಯಾನಂದ ಗಿರಿ ಮಾತಾಜಿ, ಕಿಲ್ಲಾತೊರಗಲ್ಲ ಚನ್ನಮಲ್ಲ ಸ್ವಾಮೀಜಿ, ಆಂಧ್ರಪ್ರದೇಶದ ಮಾತೋಶ್ರೀ ಚರನಾಮಂದಗಿರಿ ಅಮ್ಮ, ಶಾಸಕರಾದ ಮಹಾಂತೇಶ ಕೌಜಲಗಿ, ದುಯೋರ್ಧನ ಐಹೊಳೆ, ಎಂಎಲ್ಸಿ ಹನಮಂತ ನಿರಾಣಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಯುವ ಮುಖಂಡ ಸವೋರ್ತ್ತಮ ಜಾರಕಿಹೊಳಿ ಇತರರಿದ್ದರು.
ಕೃಷಿಮೇಳದಲ್ಲಿ ವ್ಯಾಪಾರ ವಹಿವಾಟು ಜೋರು: ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಷಿ ಮೇಳ ಅಪಾರ ರೆತರು, ಜನರನ್ನು ಎರಡನೇ ದಿನವೂ ಆಕರ್ಷಿಸಿತು. 200 ಅಧಿಕ ಮಳಿಗೆಗಳಲ್ಲಿ ವಿವಿಧ ಸಾಮಗ್ರಿಗಳನ್ನು ಜನರು ಮುಗಿಬಿದ್ದು ಖರೀದಿಸುವ ದಶ್ಯ ಕಂಡು ಬಂತು. ಕೃಷಿ ಪರಿಕರ, ಗೃಪಯೋಪಯೋಗಿ ವಸ್ತು ಖರೀದಿಸುವ ಮೂಲಕ ಭರ್ಜರಿ ವ್ಯಾಪಾರ ನಡೆಸಿದರು. ಾಸ್ಟ್ ುಡ್, ಇಲೆಕ್ಟ್ರಾನಿಕ್ ವಸ್ತುಗಳು, ನೋವು ನಿವಾರಕ ಔಷಧ, ಮಸಾಲಿ ಹಪ್ಪಳ, ಕನ್ನಡಕ, ಅಡುಗೆ ಎಣ್ಣೆ, ಪುಸ್ತಕ ಮಳಿಗೆ, ಆಹಾರ ಪದಾರ್ಥ, ಟ್ರ್ಯಾಕ್ಟರ್ ಶೋ ರೂಮ್, ಖಾದಿ ಬಟ್ಟೆಗಳು, ಕೀಟನಾಶಕಗಳು, ಹರ್ಬಲ್ ಪ್ರೊಡೆಕ್ಟ್, ರೊಟ್ಟಿ ಮಷಿನ್, ಅರಣ್ಯ ಇಲಾಖೆಯಿಂದ ಸಸಿ ಮಳಿಗೆ, ಕಷಿ ವಸ್ತು ಪ್ರದರ್ಶನ, ಸಿಸಿ ಕ್ಯಾಮರಾ ಮಾರಾಟ ಸೇರಿ ವಿವಿಧ ದೃಶ್ಯಾವಳಿಗಳು ಜನರನ್ನು ಸೆಳೆದವು. ಪಂಪ್ಸೆಟ್, ಟ್ರಾ$್ಯಕ್ಟರ್, ಕಷಿ ಯಂತ್ರೋಪಕರಣಗಳು, ರಸಗೊಬ್ಬರ ಸೇರಿ ವಿವಿಧ ವಸ್ತುಗಳ ಖರೀದಿ ಜೋರಾಗಿತ್ತು.