ಹೊಸಪೇಟೆ: ಭತ್ತ ಮೇಲ್ವರ್ಗದವರ ಧಾನ್ಯವಾದರೆ ರಾಗಿ ಶ್ರಮಿಕರ ಧಾನ್ಯವಾಗಿತ್ತು ಎಂದು ಕನ್ನಡ ವಿವಿ ಸಂಶೋಧನಾರ್ಥಿ ಎಂ.ರಮೇಶ ಹೇಳಿದರು.
ಇದನ್ನೂ ಓದಿ:ಸಿರಿಧಾನ್ಯ ಬೆಳೆ ಪರಿಸರ ಸ್ನೇಹಿ
ತಾಲೂಕಿನ ಕಮಲಾಪುರದಲ್ಲಿ ಹಾಲುಮತ ಸಾಂಸ್ಕೃತಿಕ ವೇದಿಕೆ ಹಾಗೂ ಕನಕ ನೌಕರರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಹಾಲುಮತ ಸಮಾಜದ ಸಾಂಸ್ಕೃತಿಕ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭತ್ತ ತನ್ನ ಶ್ರೇಷ್ಠತೆಯನ್ನು ಹೊಗಳುತ್ತಾ ರಾಗಿಯನ್ನು ಹೀಯಾಳಿಸುತ್ತದೆ. ಇದಕ್ಕೆ ಪ್ರತಿಯಾಗಿ ರಾಗಿ ತನ್ನ ಉಪಯೋಗದ ಬಗ್ಗೆ ತಿಳಿಸುತ್ತದೆ. ಈ ಎರಡೂ ಧಾನ್ಯಗಳ ನಡುವಿನ ಸಂಘರ್ಷದ ಜತೆ ರಾಮಧಾನ್ಯ ಚರಿತೆಯಲ್ಲಿ ಅಂತಿಮ ಸಾರಾಂಶವೆಂದರೆ ಅಂದಿನ ವರ್ಣವ್ಯವಸ್ಥೆ ವಿರೋಧಿಸಿ ಸಮಾನತೆಯನ್ನು ಕಾಣುವುದಾಗಿದೆ ಎಂದರು. ರೈತ ಮುಖಂಡ ಕೆ.ಹನುಮಂತಪ್ಪ, ಹಾಲುಮತ ಸಾಂಸ್ಕೃತಿಕ ವೇದಿಕೆ ಸಂಚಾಲಕ ಕೆ.ರಮೇಶ್, ಪ್ರಮುಖರಾದ ಕೆ.ಉದಯಕುಮಾರ, ಯರಿಸ್ವಾಮಿ, ಮಲ್ಲಿಕಾರ್ಜುನ, ಕೆ.ಪಾರ್ವತಿ ಇತರರಿದ್ದರು.