ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಧರ್ಮರಾಯ ಇಂಗಳೆ ರಕ್ತ ದಾನ ಮಾಡಿದರು. ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ವಿಜಯಾನಂದ ಹಳ್ಳಿ ಇದ್ದರು. 
ಜಿಲ್ಲೆ

ರಕ್ತ ಅಮೃತಕ್ಕೆ ಸಮಾನ

Vijayapura - Desk - Gurappa Lokuri

ಬೀಳಗಿ: ಜೀವ ಉಳಿಸುವಲ್ಲಿ ರಕ್ತ ಅಮೃತಕ್ಕೆ ಸಮಾನವಾಗಿದ್ದು, ರಕ್ತದಾನ ಮಹಾದಾನಗಳಲ್ಲಿ ಒಂದಾಗಿದೆ ಎಂದು ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ. ಎನ್. ಪಾಟೀಲ ಹೇಳಿದರು.

ಬಾಡಗಂಡಿಯ ಎಸ್.ಆರ್. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಕ್ತದಾನ ಮಾಡಿದ ಒಂದು ಪಾಯಿಂಟ್ ರಕ್ತವು ಮೂರು ಜೀವಗಳನ್ನು ಉಳಿಸಬಹುದು. ಒಂದು ಕ್ಷಣ ಅದರ ಬಗ್ಗೆ ಯೋಚಿಸಿ. ನಿಮ್ಮ ದಯೆಯು ಮೂರು ಜನರನ್ನು ಮಾರಣಾಂತಿಕ ಸನ್ನಿವೇಶಗಳ ಹಿಡಿತದಿಂದ ರಕ್ಷಿಸುತ್ತದೆ. ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಅವರಲ್ಲಿ ಮತ್ತೆ ಹೊಸ ರಕ್ತ ಉತ್ಪತ್ತಿಯಾಗಿ ಚೈತನ್ಯ ಬರುತ್ತದೆ ಎಂದರು.

ಸಂಶೋಧನಾ ಕೇಂದ್ರದ ಡೀನ್ ಧರ್ಮರಾಯ ಇಂಗಳೆ ಸ್ವಯಂ ರಕ್ತದಾನ ಮಾಡಿ ಮಾತನಾಡಿ, ಅಪಘಾತ ಹಾಗೂ ಇತರ ಕಾಯಿಲೆಗೆ ಒಳಪಟ್ಟವರಿಗೆ ದಾನ ಮಾಡಿದ ರಕ್ತವು ಒಂದು ಜೀವಕ್ಕೆ ಸಂಜೀವಿನಿ ಆಗಲಿದೆ ಎಂದರು.

ಈ ವೇಳೆ 30 ಕ್ಕೂ ಹೆಚ್ಚು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು

ಸಂಸ್ಥೆಯ ನಿರ್ದೇಶಕ ದಯಾನಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ವಿಜಯಾನಂದ ಹಳ್ಳಿ, ವೈದ್ಯಕೀಯ ನಿರ್ದೇಶಕ ಡಾ. ರಾಘವೇಂದ್ರ ಪಾಟೀಲ, ಪ್ರವೀಣ ಕಂಠಿ, ರಕ್ತನಿಧಿ ಕೇಂದ್ರದ ತಜ್ಞ ಡಾ. ಸಂತೋಷ ಗುಡಗಂಟಿ, ಆರೈಕೆ ಅಧೀಕ್ಷಕಿ ಲೀಲಾ ದನೋಡೆ, ತಾಂತ್ರಿಕ ರಕ್ತನಿಧಿ ಕೇಂದ್ರದ ಮೇಲ್ವಿಚಾರಕ ಪ್ರವೀಣ ಮುಡಾಸದ, ಲ್ಯಾಬ್ ತಾಂತ್ರಿಕ ಮೇಲ್ವಿಚಾರಕ ರವೀಂದ್ರ ಘಂಟಿ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.